ಇಎಸ್​ಐ ಅನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿಸಲು ನಿರ್ಧಾರ

11DND2 ESI
Published on

ದಾಂಡೇಲಿ: ಕಾರ್ವಿುಕ ನಿಗಮದ ರಾಜ್ಯ ಹೆಚ್ಚುವರಿ ಆಯುಕ್ತ ಟಿ. ರೇಣುಕಾ ಪ್ರಸಾದ ದಾಂಡೇಲಿಯ ಇಎಸ್​ಐ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.

ಜಿಲ್ಲೆಯ ಏಕೈಕ ಇಎಸ್​ಐ ಆಸ್ಪತ್ರೆ ಇದಾಗಿದ್ದು, 8 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಕಟ್ಟಡ ಹೊಂದಿದ್ದು, ದಾಂಡೇಲಿ ನಗರದ ಹೃದಯ ಭಾಗದಲ್ಲಿದೆ. ಹೀಗಾಗಿ ಇದನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸಬೇಕು ಎಂದು ಸಭೆಯಲ್ಲಿ ಬೇಡಿಕೆ ಮಂಡಿಸಲಾಯಿತು.

ಆಸ್ಪತ್ರೆ, ಸಿಬ್ಬಂದಿ ಹಾಗೂ ಪ್ರಮುಖ ವೈದ್ಯರ ಕೊರತೆ ಮತ್ತು ಆಂಬುಲೆನ್ಸ್ ಸೇವೆಯ ಅವಶ್ಯಕತೆ ಬಗ್ಗೆ ರ್ಚಚಿಸಲಾಯಿತು.

ರೇಣುಕಾ ಪ್ರಸಾದ ಮಾತನಾಡಿ, ಆಸ್ಪತ್ರೆಗೆ ಬೇಕಾಗಿರುವ ಮೂಲಸೌಕರ್ಯ ಸೇರಿ ಸಿಬ್ಬಂದಿ ನೇಮಕ ಮಾಡುವ ಕುರಿತು ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಇಎಸ್​ಐ ಆಸ್ಪತ್ರೆ ವೈದ್ಯಾಧಿಕಾರಿ ಸೈಯ್ಯದ್ ಗೌಸ್, ಹುಬ್ಬಳಿಯ ಎಸ್​ಆರ್ ಉಪ ನಿರ್ದೇಶಕ ರಾಘುರಾಮನ್, ರಾಜ್ಯ ವೈದ್ಯಕೀಯ ಅಧಿಕಾರಿ ಸಲ್ಮಾ ಜಬಿನಾ, ಸಹಾಯಕ ಇಂಜಿನಿಯರ್ ವಿನೋದ ಕಾರ್ಕವಾಡ ಹಾಗೂ ದಾಂಡೇಲಿ ನಗರಸಭೆ ಸದಸ್ಯರಾದ ಮೋಹನ ಹಲವಾಯಿ, ದಶರಥ ಬಂಡಿವಡ್ಡರ ಬುದ್ದಿವಂತಗೌಡ ಪಾಟೀಲ, ಅನಿಲ ರಾಯ್ಕರ, ಕಾಗದ ಕಾರ್ಖಾನೆಯ ಕೀರ್ತಿ ಗಾಂವಕರ, ಮಿಥುನ ನಾಯ್ಕ, ಅಸಂಘಟಿತ ಕಾರ್ವಿುಕ ಸಂಘಟನೆಯ ಧುರಿಣ ರಾಜೇಸಾಬ್ ಕೆಸನೂರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net