ಬಸವೇಶ್ವರರ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧಾರ

Decision to install bronze statue of Basaveshwara
Published on

ಶಿರಹಟ್ಟಿ: ಪಟ್ಟಣದ ಹೃದಯ ಭಾಗದಲ್ಲಿರುವ ಆಶ್ವಾರೂಢ ಬಸವೇಶ್ವರರ ಮೂರ್ತಿ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಅದೇ ಮಾದರಿಯ ಹೊಸ ಕಂಚಿನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.

ಪಟ್ಟಣದ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸರ್ವಜ್ಞ ಸಮಾಜದ ಪ್ರತಿನಿಧಿಗಳ ಸಮ್ಮುಖದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಥಳೀಯ ಬಸವ ಸಮಿತಿ ಸಭೆಯಲ್ಲಿ ನೂತನ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ತೀರ್ಮಾನ ಕೈಗೊಳ್ಳಲಾಗಿದೆ.

1970ರಲ್ಲಿ ದಿ. ಜೋಗೆಪ್ಪ ಹಲಸೂರ ಅವರು ಬಸವೇಶ್ವರರ ಮೂರ್ತಿ ಕೊಡುಗೆಯಾಗಿ ನೀಡಿದ್ದರು. ಅದು ಶಿಥಿಲಗೊಂಡಿರುವ ಕಾರಣ ನೂತನ ಮೂರ್ತಿ ಪ್ರತಿಷ್ಠಾಪನೆ ಅಗತ್ಯವಾಗಿದೆ ಎಂದು ಬಸವ ಸಮಿತಿ ಅಧ್ಯಕ್ಷ ಬಸವರಾಜ ತುಳಿ ತಿಳಿಸಿದರು.

ಈ ಮೊದಲಿನ ಮೂರ್ತಿ ದಾನಿ ದಿ. ಜೋಗೆಪ್ಪ ಹಲಸೂರ ಕುಟುಂಬದ ಮೊಮ್ಮಕ್ಕಳಾದ ಬಸವರಾಜ ಹಾಗೂ ಪ್ರಭು ಗುರುಸಿದ್ದಪ್ಪ ಹಲಸೂರ ಅವರು ಹೊಸ ಕಂಚಿನ ಮೂರ್ತಿಗೆ 15 ಲಕ್ಷ ರೂ. ನೀಡುವುದಾಗಿ ವಾಗ್ದಾನ ಮಾಡಿದರು.

ಬಸವ ಸಮಿತಿ ಗೌರವಾಧ್ಯಕ್ಷ ಎಚ್.ಎಂ. ದೇವಗಿರಿ, ಕಾರ್ಯದರ್ಶಿ ಸಂತೋಷ ಕುರಿ, ಜಿಪಂ ಮಾಜಿ ಅಧ್ಯಕ್ಷ ವಿ.ವಿ. ಕಪ್ಪತ್ತನವರ, ಎಚ್.ಡಿ. ಮಾಗಡಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ, ಪಪಂ ಮಾಜಿ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ, ನಾಗರಾಜ ಲಕ್ಕುಂಡಿ, ಬಸವರಾಜ ಬೋರಶೆಟ್ಟರ, ಅಕ್ಬರ ಯಾದಗಿರಿ, ಬಸವರಾಜ ವಡವಿ, ಪುನೀತ ಓಲೇಕಾರ, ಮುತ್ತಣ್ಣ ಮಜ್ಜಗಿ, ಶಶಿಧರ ದೇಗಾವಿ, ಶಶಿಧರ ಪೂಜಾರ, ಅಶೋಕ ವರವಿ, ಮುತ್ತುರಾಜ ಭಾವಿಮನಿ, ಶಿವಾನಂದ ಮುಳಗುಂದ, ಕೆ.ಎಫ್. ರಮಜಾನವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net