ಮಸ್ಕಿಯಲ್ಲಿ ಶೇ.3 ತೆರಿಗೆ ಹೆಚ್ಚಳಕ್ಕೆ ನಿರ್ಧಾರ

ಮಸ್ಕಿ ಪುರಸಭೆಯಲ್ಲಿ ೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ 2025-26ನೇ ಸಾಲಿನ ಬಜೆಟ್ ಪ್ರತಿ ಪ್ರದರ್ಶಿಸಿದರು. ಉಪಾಧ್ಯಕ್ಷೆ ಗೀತಮ್ಮ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ್, ಪುರಸಭೆ ಸದಸ್ಯರಾದ ರವಿಗೌಡ ಪಾಟೀಲ್, ತಿಮ್ಮಣ್ಣ ಚಿಗರಿ, ದೊಡ್ಡ ಕರಿಯಪ್ಪ, ಮೌನೇಶ್ ಮುರಾರಿ, ಶರಣಯ್ಯ ಸೊಪ್ಪಿಮಠ, ಮಂಜುನಾಥ, ರೇಣುಕಾ ಉಪ್ಪಾರ, ಭರತ ಕುಮಾರ್, ಶಬ್ಬೀರ್ ಸಾಬ್ ಇತರರಿದ್ದರು.
ಮಸ್ಕಿ ಪುರಸಭೆಯಲ್ಲಿ ೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ 2025-26ನೇ ಸಾಲಿನ ಬಜೆಟ್ ಪ್ರತಿ ಪ್ರದರ್ಶಿಸಿದರು. ಉಪಾಧ್ಯಕ್ಷೆ ಗೀತಮ್ಮ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ್, ಪುರಸಭೆ ಸದಸ್ಯರಾದ ರವಿಗೌಡ ಪಾಟೀಲ್, ತಿಮ್ಮಣ್ಣ ಚಿಗರಿ, ದೊಡ್ಡ ಕರಿಯಪ್ಪ, ಮೌನೇಶ್ ಮುರಾರಿ, ಶರಣಯ್ಯ ಸೊಪ್ಪಿಮಠ, ಮಂಜುನಾಥ, ರೇಣುಕಾ ಉಪ್ಪಾರ, ಭರತ ಕುಮಾರ್, ಶಬ್ಬೀರ್ ಸಾಬ್ ಇತರರಿದ್ದರು.
Published on

ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಬಜೆಟ್ ಸಭೆ ನಡೆಯಿತು. ಪ್ರಸಕ್ತ ವರ್ಷ 17,13,43,205 ಆದಾಯ ನಿರೀಕ್ಷಿಸಿದ್ದು, 17,08,93,205 ಅಂದಾಜು ಖರ್ಚಾಗಲಿದ್ದು, 4.50 ಲಕ್ಷ ರೂ. ಉಳಿತಾಯದ ಆಯವ್ಯಯವನ್ನು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮಂಡಿಸಿದರು.

ಪೌರಾಡಳಿತ ಇಲಾಖೆಯ ಸುತ್ತೋಲೆ ಪ್ರಕಾರ ತೆರಿಗೆ ಪ್ರಮಾಣ ಶೇ.3 ರಿಂದ 5 ಹೆಚ್ಚಳ ಮಾಡಲು ನಿರ್ದೆಶನ ನೀಡಿದೆ. ಸರ್ವ ಸದಸ್ಯರು ಚರ್ಚಿಸಿ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮುಖ್ಯಾಧಿಕಾರಿ ನರಸರೆಡ್ಡಿ ಕೋರಿದರು. ಸದಸ್ಯರು ಮಾತನಾಡಿ, ಈಗಾಗಲೇ ಸಾರ್ವಜನಿಕರಿಗೆ ತೆರಿಗೆ ಹೆಚ್ಚಳದ ಬಿಸಿ ತಟ್ಟಿದ್ದು, ಮತ್ತೆ ಏರಿಕೆ ಮಾಡುವುದು ಬೇಡ ಎಂದರು. ನಂತರ ತೆರಿಗೆ ಹೆಚ್ಚಳ ಮಾಡದಿದ್ದರೆ ನಗರಾಭಿವೃದ್ಧಿ ಇಲಾಖೆಯಿಂದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವುದಿಲ್ಲ ಎಂಬ ಸೂಚನೆ ಇದೆ. ಆದ್ದರಿಂದ ಅನಿವಾರ್ಯವಾಗಿ ಶೇ.3 ತೆರಿಗೆ ಹೆಚ್ಚು ಮಾಡಲಿ. ಎಸ್‌ಎಫ್‌ಸಿ 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ತಯಾರಿಸಿದ್ದು, ಅದರಂತೆ ಪಟ್ಟಣದ ವಿವಿಧ ವಾರ್ಡಗಳಲ್ಲಿ ಕೆಲಸ ಮಾಡಲು ಹಾಗೂ ಘನತ್ಯಾಜ್ಯ ಸಂಗ್ರಹಕ್ಕಾಗಿ 5 ಎಕರೆ ಭೂಮಿ ಗುರುತಿಸಲಾಗಿದ್ದು, ಕಾಂಪೌಂಡ್ ನಿರ್ಮಾಣದ ನಂತರ ತ್ಯಾಜ್ಯ ಸಂಗ್ರಹಿಸಲಾಗುವುದು ಅಲ್ಲಿವರೆಗೆ ಬಾಡಿಗೆ ಜಾಗದಲ್ಲಿ ಮುಂದುವರಿಸಲು ಸದಸ್ಯರು ಒಪ್ಪಿಗೆ ಸೂಚಿಸಿದರು.

ಮೌನೇಶ ಮುರಾರಿ ಮಾತನಾಡಿ, ನಾಮನಿರ್ದೇಶಿತ ಸದಸ್ಯರಿಗೆ ವಾರ್ಡ್ ಅಭಿವೃದ್ಧಿಗೆ ಅನುದಾನ ನೀಡಲು ಮನವಿ ಮಾಡಿದರು. ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಒಪ್ಪಿಗೆ ನೀಡಿದರು. ಉಪಾಧ್ಯಕ್ಷೆ ಗೀತಮ್ಮ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ್, ವ್ಯವಸ್ಥಾಪಕ ಸತ್ಯನಾರಾಯಣ, ಸದಸ್ಯರಾದ ರವಿಗೌಡ ಪಾಟೀಲ್, ತಿಮ್ಮಣ್ಣ ಚಿಗರಿ, ದೊಡ್ಡ ಕರಿಯಪ್ಪ, ಮೌನೇಶ ಮುರಾರಿ, ಶರಣಯ್ಯ ಸೊಪ್ಪಿಮಠ, ಮಂಜುನಾಥ, ರೇಣುಕಾ ಉಪ್ಪಾರ, ಭರತ ಕುಮಾರ್, ಶಬ್ಬೀರ್ ಸಾಬ್, ಕೃಷ್ಣ ಚಿಗರಿ, ಶಿವು ಬ್ಯಾಳಿ, ರೇಣುಕಾ ಉಪ್ಪಾರ, ಕಾವ್ಯಾ ಮರಳದ, ಮಮತಾ ಪತ್ತಾರ, ಹುಲಿಗೆಮ್ಮ, ದುರುಗಮ್ಮ, ಲಕ್ಷ್ಮೀ, ಪ್ರಮುಖರಾದ ಶಿವಣ್ಣ, ನಾಗರಾಜ, ಜಗದೀಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net