ತುಳು ಸಮ್ಮೇಳನ ನಡೆಸಲು ತೀರ್ಮಾನ

Decision to hold Tulu conference
Published on

ಮಡಿಕೇರಿ:

ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಸಮಿತಿಯ ಪದಾಧಿಕಾರಿಗಳ ಸಭೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುಳು ಸಮ್ಮೇಳನ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ತುಳುಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಂದೇ ವೇದಿಕೆಯಡಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ತುಳು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯ ಎಲ್ಲಾ ತುಳುಭಾಷಿಕ ಸಮುದಾಯದ ಮುಖಂಡರುಗಳು ಹಾಗೂ ತುಳು ಭಾಷಿಕ ಜನಾಂಗ ಬಾಂಧವರು ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವಂತೆ ಬಿ.ಬಿ. ಐತ್ತಪ್ಪ ರೈ ಮನವಿ ಮಾಡಿದರು.

ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕöÈತಿ ಕುರಿತು ವಿಚಾರಗೋಷ್ಠಿಗಳು, ಸಾಂಸ್ಕöÈತಿಕ ಕಾರ್ಯಕ್ರಮಗಳು, ತುಳು ನಾಡಿನ ಸಂಸ್ಕöÈತಿ ಬಿಂಬಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆಯನ್ನು ಆಕರ್ಷಣೀಯಗೊಳಿಸಬೇಕು. ತುಳುನಾಡಿನ ಪ್ರಸಿದ್ಧ ಕಲಾವಿದರುಗಳನ್ನು ಆಹ್ವಾನಿಸುವ ಮೂಲಕ ಸಮ್ಮೇಳನವನ್ನು ವರ್ಣರಂಜಿತಗೊಳಿಸಬೇಕು. ಸಮ್ಮೇಳನಕ್ಕೆ ಸಂಬAಧಿಸಿದAತೆ ಜಿಲ್ಲೆಯ ಎಲ್ಲಾ ತುಳುಭಾಷಿಕ ಸಮುದಾಯದ ಪ್ರಮುಖರ ಮತ್ತು ಜಿಲ್ಲೆಯ ತುಳುಕೂಟದ ಪದಾಧಿಕಾರಿಗಳ ಸಭೆ ನಡೆಸಿ ಸಮಾಲೋಚನೆ ಮಾಡಬೇಕು. ಮುಂದಿನ ಸಭೆಯಲ್ಲಿ ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲು ಸಭೆ ನಿರ್ಧಾರ ಕೈಗೊಂಡಿತು.

ತುಳುವೆರ ಜನಪದ ಕೂಟದ ಜಿಲ್ಲಾ ಉಪಾಧ್ಯಕ್ಷ ಬಿ.ವೈ. ಆನಂದ ರಘು, ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ, ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ, ಖಜಾಂಚಿ ಪ್ರಭು ರೈ, ಪೊನ್ನಂಪೇಟೆ ತಾಲ್ಲಕು ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ಮಡಿಕೇರಿ ತಾಲ್ಲಕು ಸಂಚಾಲಕ ಪ್ರಸಾದ್ ಬಿಳಿಗೇರಿ, ಸದಸ್ಯರುಗಳಾದ ಸಂಧ್ಯಾ ಗಣೇಶ್ ರೈ, ಲೀಲಾ ಶೇಷಮ್ಮ, ಕವಿತಾ ಕುಂದರ್, ಬಿ.ಎಸ್.ಜಯಪ್ಪ, ಕೆ.ಆರ್.ವಿಜಯ, ಜಗದೀಶ್ ಆಚಾರ್ಯ, ಗಿರೀಶ್ ರೈ, ಚಂದ್ರಶೇಖರ್ ಕುಲಾಲ್, ಸಾವಿತ್ರಿ, ಪ್ರಕಾಶ್ ಆಚಾರ್ಯ, ಅಶೋಕ ಆಚಾರ್ಯ, ಸುಧೀರ್, ಬಿ.ಎಸ್.ಪುರುಷೊತ್ತಮ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net