ಶೇ.20ರಷ್ಟು ಡಿವಿಡೆಂಡ್ ನೀಡಲು ತೀರ್ಮಾನ

ಸಿದ್ದಾಪುರದ ಎಂ.ಜಿ.ರಸ್ತೆಯಲ್ಲಿರುವ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಭಾಂಗಣದಲ್ಲಿ ಮಂಗಳವಾರ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು.
ಸಿದ್ದಾಪುರದ ಎಂ.ಜಿ.ರಸ್ತೆಯಲ್ಲಿರುವ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಭಾಂಗಣದಲ್ಲಿ ಮಂಗಳವಾರ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು.
Published on

ಸಿದ್ದಾಪುರ: ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿಯತ್ತ ಸಾಗುತ್ತಿದ್ದು, 2023 -24ನೇ ಸಾಲಿನಲ್ಲಿ 1.06ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್.ವೆಂಕಟೇಶ್ ತಿಳಿಸಿದರು.

ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 94ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಗುಹ್ಯ, ಕರಡಿಗೋಡು, ಸಿದ್ದಾಪರ ಈ ಮೂರು ಗ್ರಾಮಗಳ ವ್ಯಾಪ್ತಿಯನ್ನೊಳಗೊಂಡ ಸಂಘದಲ್ಲಿ ಪಾಲು ಬಂಡವಾಳ 2.23 ಕೋಟಿ ರೂ.ಇದ್ದು, 46.15 ಕೋಟಿ ರೂ.ಠೇವಣಿ, 30.20 ಕೋಟಿ ರೂ. ಹೊರಬಾಕಿ ಸಾಲವಿದೆ. ಸಂಘದಲ್ಲಿ 56.16 ಕೋಟಿ ರೂ.ದುಡಿಯುವ ಬಂಡವಾಳವಿದ್ದು, 2023-24 ನೇ ಸಾಲಿನಲ್ಲಿ 225.77 ಕೋಟಿ ರೂ. ವ್ಯವಹಾರ ನಡೆಸಲಾಗಿದೆ. ಇದರಿಂದ ಸಂಘದ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ನೀಡಲು ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಡೀಸೆಲ್/ ಪೆಟ್ರೋಲ್ ವ್ಯಾಪಾರದಲ್ಲಿ 21.81 ಕೋಟಿ ರೂ. ವ್ಯವಹಾರ ನಡೆಸಲಾಗಿದ್ದು, ಗುಹ್ಯ ಗ್ರಾಮದಿಂದ ಕೆ.ಜಿ.ಮ್ಯಾಥ್ಯು, ಸಿದ್ದಾಪುರದಿಂದ ಎಂ.ಕೆ.ಮಣಿ ಮತ್ತು ಕರಡಿಗೋಡು ಗ್ರಾಮದಿಂದ ಕುಕ್ಕುನೂರು ನಾಣಯ್ಯ ಮತ್ತು ಕರಡಿಗೋಡು ಗ್ರಾಮದ ಕೆ.ಕೆ ದಿನೇಶ್ ಅವರನ್ನು ಸಂಘದ ವತಿಯಿಂದ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ 3 ಸ್ವ ಸಹಾಯ ಗುಂಪುಗಳಿಗೆ ತಲಾ 5,000 ರೂ.ಬಹುಮಾನ ನೀಡಲಾಯಿತು.

ಉಪಾಧ್ಯಕ್ಷ ಎಂ.ಬಿಜಾಯ್, ಸದಸ್ಯರಾದ ಎಸ್.ಬಿ.ಪ್ರತೀಶ್, ವಾಸು, ಚಂದ್ರನ್,ಶೀಬು, ಪ್ರಮೀಳಾ, ಸುನಿಲ್, ಬಶೀರ್, ದೇವಯಾನಿ, ಮಿಲನ್, ಚೆಲುವಯ್ಯ, ಸಿಇಒ ಪ್ರಸನ್ನ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net