

ಎನ್.ಆರ್.ಪುರ: ಪಿಸಿಎಆರ್‌ಡಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 24.73 ಲಕ್ಷ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ನೀಲುವಾನಿ ರಂಗನಾಥ ಹೇಳಿದರು.
ಕೃಷಿ ಭವನದಲ್ಲಿ ಶನಿವಾರ ಪಿಸಿಎಆರ್‌ಡಿ ಬ್ಯಾಂಕ್ 2022-23ನೇ ಸಾಲಿನ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 5.86 ಕೋಟಿ ರೂ.ಸಾಲ ವಿತರಣೆ ಮಾಡಲಾಗಿದೆ. ಶೇ.70ಕ್ಕಿಂತ ಹೆಚ್ಚಿನ ಸಾಲ ವಸೂಲಿ ಮಾಡಿ ಸಾಲ ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಈ ಬಾರಿ ಬ್ಯಾಂಕ್‌ನ ಎಲ್ಲ ಷೇರುದಾರರಿಗೆ ಶೇ.10 ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ. ಸದಸ್ಯರಿಗೆ ಶೇ.3ರ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ವಿತರಣೆ ಮಾಡಲು ಸಹಕಾರಿಯಾಗಿದೆ. 2023-24ನೇ ಸಾಲಿನಲ್ಲಿಯೂ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ವಿತರಿಸಲು ತಿರ್ಮಾನಿಸಲಾಗಿದೆ ಎಂದರು.
ಬ್ಯಾಂಕ್‌ನ ವ್ಯವಸ್ಥಾಪಕ ಎಚ್.ಎ.ಪ್ರದ್ಯುಮ್ನ, ಉಪಾಧ್ಯಕ್ಷ ಎ.ಎಲ್.ಮಹೇಶ್, ನಿರ್ದೇಶಕರಾದ ಜಿ.ವಿ.ಸಂದೇಶ್, ವಿ.ಕೆ.ಸನ್ನಿ, ಎನ್.ಜಿ.ನಾಗೇಶ್, ಕೆ.ಸಿ.ಜಯಪಾಲ, ವೈ.ಎಸ್.ರವಿ, ಕೆ.ಆರ್.ಜಯಂತಿ, ಸತ್ಯಾನಂದ, ಕೆ.ಜಿ.ಯಲ್ಲಪ್ಪಗೌಡ, ಎನ್.ಆರ್.ಸತೀಶ್, ಬಾಬು, ಎಚ್.ಎಸ್.ಪ್ರಸನ್ನ ಇದ್ದರು.