ಅಕ್ರಮ ಖಾತೆಗಳ ವಜಾಕ್ಕೆ ನಿರ್ಧಾರ

ಮಾಲೂರು ಪುರಸಭೆಯ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪುರಸಭಾ ವಿಶೇಷ ಸಾಮಾನ್ಯ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ, ಅಧ್ಯಕ್ಷೆ ಕೋಮಲಾ ನಾರಾಯಣ್​, ತಹಸೀಲ್ದಾರ್​ ಕೆ.ರಮೇಶ್​, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್​ ನಯೀಮ್​ವುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಪುರಸಭೆ ಮುಖ್ಯಾಧಿಕಾರಿ ಪ್ರದಿಪ್​ ಇದ್ದರು.
2
ಮಾಲೂರು ಪುರಸಭೆಯ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪುರಸಭಾ ವಿಶೇಷ ಸಾಮಾನ್ಯ ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ, ಅಧ್ಯಕ್ಷೆ ಕೋಮಲಾ ನಾರಾಯಣ್​, ತಹಸೀಲ್ದಾರ್​ ಕೆ.ರಮೇಶ್​, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್​ ನಯೀಮ್​ವುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಪುರಸಭೆ ಮುಖ್ಯಾಧಿಕಾರಿ ಪ್ರದಿಪ್​ ಇದ್ದರು.
Published on

ಶಾಸಕ ಕೆ.ವೈ.ನಂಜೇಗೌಡ ಮಾಹಿತಿ - ಎಷ್ಟೇ ಪ್ರಭಾವಿಗಳಿದ್ದರೂ ಕ್ರಮದ ಎಚ್ಚರಿಕೆ



ಮಾಲೂರು : ಸುಮಾರು ವರ್ಷಗಳಿಂದ ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮ ಖಾತೆಗಳನ್ನು ಮಾಡಿಕೊಂಡು ಸ್ವಾಧಿನಪಡಿಸಿಕೊಂಡಿರುವ ಪುರಸಭೆ ಆಸ್ತಿಗಳ ಖಾತೆಗಳನ್ನು ವಜಾ ಮಾಡಿ, ಪುರಸಭೆಗೆ ವಶಪಡಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಸದಸ್ಯರ ಸರ್ವಾನುಮತದಿಂದ ತಿಮಾರ್ನ ತೆಗೆದುಕೊಳ್ಳಲಾಯಿತು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಪಟ್ಟಣದ ಪುರಸಭೆ ಕಚೇರಿಯ ಸಭಾಂಗಣದಲ್ಲಿ ಶನಿವಾರ ಪುರಸಭೆ ಅಧ್ಯೆ ಕೋಮಲ ನಾರಾಯಣ್​ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಮಾನ್ಯ ಸಭೆಯ ನಂತರ ಮಾತನಾಡಿದ ಅವರಿ, ಅಕ್ರಮವಾಗಿ ಖಾತೆ ಮಾಡಿಕೊಂಡು ಮನೆ, ಅಂಗಡಿ ಮಳಿಗೆ ಇನ್ನಿತರ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ ಗಮನಕ್ಕೆ ಬಂದಾಗ 2 ವರ್ಷಗಳ ಹಿಂದೆಯೇ ಪುರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಗುರುತಿಸಲು ಸೂಚಿಸಿದ್ದೇ, ಆದರೆ ಅಧಿಕಾರಿಗಳು ಕೆಲಸ ವಿಳಂಬ ಮಾಡಿದರು. ನಂತರ 2 ನೇ ಬಾರಿ ಶಾಸಕನಾದ ಮೇಲೆ ಮತ್ತೇ ಈ ಬಗ್ಗೆ ಅಧಿಕಾರಿಗಳಿಗೆ ಆಸ್ತಿ ಗುರುತಿಸಿ ಮಾಹಿತಿ ನೀಡಲು
ಸೂಚಿಸಿದ ಹಿನ್ನಲೆ ಅಧಿಕಾರಿಗಳು 260 ಕೋಟಿ ಬೆಲೆಯುಳ್ಳ 326 ಪುರಸಭೆ ಆಸ್ತಿ ಗುರುತಿಸಿ ಮಾಹಿತಿ ನೀಡಿದ್ದು, ಅವರು ಎಷ್ಟೇ ಪ್ರಭಾವಿಗಳಾದರೂ ಅಕ್ರಮ ಖಾತೆ ವಜಾ ಮಾಡಿ ಪುರಸಭೆಗೆ ವಶಪಡಿಸಿಕೊಳ್ಳಬೇಕು ಎಂದು ಸರ್ವಸದಸ್ಯರು ಪಕ್ಷಾತಿತವಾಗಿ ಸರ್ವಾನುಮತದಿಂದ ತಿಮಾರ್ನಿಸಿದ್ದು, ಈ ಬಗ್ಗೆ ಡಿಸಿಗೆ ಪುರಸಭೆ ಅಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ.
ಇನ್ನೂ ಈಗ ಗುರುತಿಸಿರುವ ಪುರಸಭೆ ಆಸ್ತಿಗಳಲ್ಲಿ ನಮಗೆ ಬೇಕಾದವುಗಳನ್ನು ಬಿಟ್ಟು ಇನ್ನೂಳಿದ ಆಸ್ತಿಗಳನ್ನು ಸರ್ಕಾರದ ಒಪ್ಪಿಗೆ ಪಡೆದು ಹರಾಜುಪಡಿಸಿ ಪುರಸಭೆಗೆ ನೂರಾರು ಕೋಟಿ ಆದಾಯ ಮಾಡಲಾಗುವುದು. ಹಾಗೇ ವಿಶೇಷವಾಗಿ ಮಾಲೂರು ಪಟ್ಟಣದ ಅಭಿವೃದ್ಧಿಗೆ 33 ಕೋಟಿ ರೂ.ಅನುದಾನ ಬಂದಿದ್ದು, ಕಾಮಗಾರಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಇನ್ನೂ 34 ಕೋಟಿ ರೂ.ಗಗಳಲ್ಲಿ ಮಾಲೂರು ದೊಡ್ಡ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ. 10 ಕೋಟಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಹಾಗೇ 21.50 ಕೋಟಿ ರೂ.ಗಳಲ್ಲಿ ಮಾಲೂರು ಬಸ್​ ನಿಲ್ದಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿದ್ದು, ಈ ಬಾರಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net