

ಮಡಿಕೇರಿ: ಚೇರಳ ಗೌಡ ಸಂಘದ ನೂತನ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಘದ ಅಧ್ಯಕ್ಷ ಐಯಂಡ್ರ ರಾಘವಯ್ಯರವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ೧೫ನೇ ವಾರ್ಷಿಕ ಮಹಾಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಂಘದ ನೂತನ ಕಟ್ಟಡದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಘವಯ್ಯ, ಸಂಘದಲ್ಲಿ ಕಡಿಮೆ ಸಂಖ್ಯೆಯ ಸದಸ್ಯರಿದ್ದರೂ ಎಲ್ಲರ ಸಹಕಾರದಿಂದ ೧೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಅಲ್ಲದೆ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಮೇಲಿನ ಅಂತಸ್ತಿನ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆ ಇಂದು ಇದೇ ಕಟ್ಟಡದಲ್ಲಿ ಮಹಾಸಭೆ ನಡೆಸಲು ಸಾಧ್ಯವಾಗಿದೆ. ಇದು ಹೆಮ್ಮೆಯ ವಿಚಾರವೆಂದು ಹರ್ಷ ವ್ಯಕ್ತಪಡಿಸಿದರು.
ಸಂಘದ ಸದಸ್ಯರಿಗೆ ಸಮಾಜದ ಸಭಾಂಗಣವನ್ನು ಸಭೆ, ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು. ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸರ್ವರು ಸಹಕಾರ ನೀಡಬೇಕೆಂದು ರಾಘವಯ್ಯ ಮನವಿ ಮಾಡಿದರು.
ಕಾರ್ಯದರ್ಶಿ ಆಜೀರ ಧನುಂಜಯ ೨೦೨೨-೨೩ನೇ ಸಾಲಿನ ವರದಿ ವಾಚಿಸಿದರು. ಉಪ ಕೋಶಾಧಿಕಾರಿ ಪೇರಿಯನ ಉದಯ ಲೆಕ್ಕಪತ್ರ ಮಂಡಿಸಿದರು. ಮರದಾಳು ದುವಿನ್ ಹಾಗೂ ಸಂಗಡಿಗರು ಪ್ರಾರ್ಥಿಸಿ, ಸಂಘದ ಖಜಾಂಚಿ ಮುಕ್ಕಾಟಿ ಪಳಂಗಪ್ಪ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಪೇರಿಯನ ಪೂಣಚ್ಚ ವಂದಿಸಿದರು.