ಏ.೧೩ರಂದು ಅದ್ಧೂರಿ ವಿಷು ಆಚರಣೆಗೆ ನಿರ್ಧಾರ

DHARMENDRA
Published on

ಮಡಿಕೇರಿ: ವಿಷು ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿರುವ(ಕೊನ್ನ ಪೂ) ಹೊನ್ನೇ ಹೂವು ವಿತರಣೆ, ವಿಷು ಕಣಿ ಹಾಗೂ ವಿಷು ಕೈನೀಟಂನ್ನು ಪ್ರತಿವರ್ಷದಂತೆ ಈ ಬಾರಿಯೂ ಅದ್ದೂರಿಯಾಗಿ ಆಚರಿಸಲು ಮಡಿಕೇರಿಯ ಹಿಂದೂ ಮಲಯಾಳಿ ಸಂಘ ನಿರ್ಧರಿಸಿದೆ.

ಸಂಘದ ವತಿಯಿಂದ ಏ.೧೩ರಂದು ಸಂಜೆ ೫ ಗಂಟೆಗೆ ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿ ಇರುವ ಹರಿಹರ ಸರ್ವಿಸ್ ಸ್ಟೇಷನ್ ಆವರಣದಲ್ಲಿ ಆಚರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ.ಧರ್ಮೇಂದ್ರ ತಿಳಿಸಿದ್ದಾರೆ.

ಸರ್ವ ಹಿಂದೂ ಮಲಯಾಳಿ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವ ಮೂಲಕ ಸದುಪಯೋಗ ಪಡೆದುಕೊಳ್ಳುಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net