ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಬುಧವಾರ ವಿದ್ಯಾರಣ್ಯಪುರಂನಲ್ಲಿರುವ ಮೈಸೂರು ಹಾಗೂ ಚಾಮರಾಜನಗರ ಒಕ್ಕಲಿಗರ ಸಂಘದ ಆವರಣದಲ್ಲಿ ವಿವಿಧ ಒಕ್ಕಲಿಗರ ಸಂಘಗಳು ಹಾಗೂ ಮುಖಂಡರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಸರ್ಕಾರದ ಕಾರ್ಯಕ್ರಮದ ಜತೆ ಸಂಘಟನೆಗಳು ಕೈಜೋಡಿಸುವ ಮೂಲಕ ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವುದು ಹಾಗೂ ಮೆರವಣಿಗೆ, ಕಲಾಮಂದಿರದ ವೇದಿಕೆ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚಿಸಲಾಯಿತು.
ಜಯಂತಿಯ ಕಾರ್ಯಕ್ರಮದ ಪ್ರಚಾರಕ್ಕಾಗಿ ಸಂಘದಿಂದ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಫ್ಲೆಕ್ಸ್ ಅಳವಡಿಕೆ ಹಾಗೂ ಆಯಾ ವಾರ್ಡ್‌ನ ಪ್ರಮುಖರು ತಮ್ಮ ಫ್ಲೆಕ್ಸ್‌ಗಳನ್ನು ವೈಯಕ್ತಿಕವಾಗಿ ಹಾಕಿಸುವಂತೆ ಹೆಚ್ಚಿನ ಪ್ರಚಾರ ಮಾಡಲು ನಿರ್ಧರಿಸಲಾಯಿತು. ಅಲ್ಲದೆ ಜಯಂತಿಗಾಗಿ ಹಣಕಾಸು ನೆರವು ಕೋರಲಾಯಿತು. ಸ್ಥಳದಲ್ಲಿಯೇ ಹಲವರು ದೇಣಿಗೆ ನೀಡಿದರು.
ಕಲಾಮಂದಿರ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗ ಸಂಘದಿಂದ ಪ್ರತಿಭಾ ಪುರಸ್ಕಾರ, ಜಿಲ್ಲಾ ಒಕ್ಕಲಿಗರ ಸಂಘದಿಂದ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಲಾಯಿತು.
ರಾಜ ಒಕ್ಕಲಿಗ ಸಂಘದ ನಿರ್ದೇಶಕರಾದ ಕೆ.ವಿ.ಶ್ರೀಧರ್, ಎಂ.ಬಿ. ಮಂಜೇಗೌಡ, ಮೈಸೂರು ಹಾಗೂ ಚಾಮರಾಜನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಉಪಾಧ್ಯಕ್ಷರಾದ ರವಿ ರಾಜಕೀಯ, ಬನ್ನೂರು ಮಹೇಶ್, ಪ್ರಧಾನ ಕಾರ್ಯದರ್ಶಿ ಚೇತನ್, ನಿರ್ದೇಶಕರಾದ ಬಿ.ಪಿ.ಬೋರೇಗೌಡ, ಸುಶೀಲಾ ನಂಜಪ್ಪ, ಕುಮಾರ್‌ಗೌಡ, ಗುರುರಾಜ್, ಗಿರೀಶ್‌ಗೌಡ, ಸಂತೋಷ್, ಮಾಜಿ ಮೇಯರ್ ಶ್ರೀಕಂಠಯ್ಯ, ಮುಖಂಡರಾದ ಮೋಹನ್‌ಕುಮಾರ್‌ಗೌಡ, ಉಮಾಶಂಕರ್, ಸುರೇಶ್‌ಗೌಡ, ಎನ್.ಆರ್.ಮೊಹಲ್ಲಾ ರಾಮಣ್ಣ, ರಾಜ್ ಕುಮಾರ್, ಸತೀಶ್‌ಗೌಡ, ಕೆ.ಎಸ್‌ಕೃಷ್ಣ, ಶೇಖರ್, ಪಡುವಾರಹಳ್ಳಿ ತಿಮ್ಮಯ್ಯ, ವಸಂತ ಮುನೇಶ್, ಎಚ್.ಎಲ್.ಯಮುನಾ, ನಗರ ಪಾಲಿಕೆ ಮಾಜಿ ಸದಸ್ಯರಾದ ಸುರೇಶ್, ಕಿರಣ್ ಮಾದೇಗೌಡ, ಜಗದೀಶ್ ಮಾಯ ಇತರರು ಇದ್ದರು.