

ತಾಳಿಕೋಟೆ: ಪಟ್ಟಣದಲ್ಲಿ ತಾಲೂಕು ಆಡಳಿತ ನೇತೃತ್ವದಲ್ಲಿ ಏ.30 ರಂದು ಬಸವಣ್ಣನವರ ಜಯಂತ್ಯುತ್ಸವ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಬಸವ ಸಮಿತಿ ನೇತೃತ್ವದಲ್ಲಿ ಭಾನುವಾರ ಸಮಾಜದ ಮುಖಂಡರ ಸಭೆ ನಡೆಯಿತು.
ಬೆಳಗ್ಗೆ 8.30 ಗಂಟೆಗೆ ಪಟ್ಟಣದ ರಾಜವಾಡೆಯಿಂದ ಆರಂಭಗೊಳ್ಳುವ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಡೊಳ್ಳು, ಕರಡಿ ಮಜಲು, ಹಲಗೆ ಮೇಳೆದೊಂದಿಗೆ ಕತ್ರಿ ಬಜಾರ, ಬಾಲಾಜಿ ಮಂದಿರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾ ಪ್ರತಾಪ ವೃತ್ತ ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿ ಸಭೆ ನಡೆಸಲಿದೆ. ಶಿಕ್ಷಕ ಸಾಹಿತಿ ಅಶೋಕ ಹಂಚಲಿ ನೀಡಲಿದ್ದಾರೆ ಎಂದು ಮುಖಂಡ ಮಹಾಂತೇಶ ಮುರಾಳ ತಿಳಿಸಿದರು.
ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಬಸವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಮಾಜದ ಮುಖಂಡರು ಸಹಮತ ವ್ಯಕ್ತಪಡಿಸಿದರು.
ಮುಖಂಡರಾದ ಪ್ರಭುಗೌಡ ಮದರಕಲ್ಲ, ಚಿಂತಪ್ಪಗೌಡ ಯಾಳಗಿ, ಬಾಬು ಹಜೇರಿ, ಮಹಾದೇವಪ್ಪ ಕುಂಬಾರ, ಅಶೋಕ ಜಾಲವಾದಿ, ಅಶೋಕ ಚಿನಗುಡಿ, ರಾಜು ಸಜ್ಜನ, ರವಿ ಚಂದುಕರ, ರಮೇಶ ಸಾಲಂಕಿ, ಡಿ.ವಿ. ಪಾಟೀಲ, ಸಂಗನಗೌಡ ಅಸ್ಕಿ, ದತ್ತು ಉಭಾಳೆ, ಜಗದೀಶ ಬಿಳೇಭಾವಿ, ನಿಂಗರಾಜ ಕುಂಟೋಜಿ, ಮುರುಗೇಶ ಕೋರಿ, ಭೀಮು ಸೂಳಿಭಾವಿ, ಎಂ.ಎಸ್. ನಾಗರಾಳ, ಜಿ.ಜಿ. ಮದರಕಲ್ಲ, ಮಂಜು ಶೆಟ್ಟಿ, ಶಿವಶಂಕರ ಹಿರೇಮಠ, ನಾಗಪ್ಪ ಚಿನಗುಡಿ, ಸಂಗಪ್ಪ ಇಜೇರಿ ಇತರರಿದ್ದರು.