ಬಸವ ಜಯಂತಿ ಅದ್ದೂರಿ ಆಚರಣೆಗೆ ನಿರ್ಣಯ

Decision to celebrate Basava Jayanti in grand style
Decision to celebrate Basava Jayanti in grand style
Published on

ಬಾದಾಮಿ: ಪಟ್ಟಣದಲ್ಲಿ ಬಸವ ಜಯಂತಿಯನ್ನು ಏ.30ರಂದು ಅದ್ದೂರಿಯಾಗಿ ಆಚರಣೆ ಮಾಡಲು ಉಪತಹಸೀಲ್ದಾರ್ ವಿದ್ಯಾನಂದ ಜಾಧವ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ರಾಚಣ್ಣ ಪಟ್ಟಣದ, ಮಲ್ಲಣ್ಣ ಯಲಿಗಾರ ಮಾತನಾಡಿ, ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡು ಬಸವಣ್ಣವರ ಕುರಿತು ಉಪನ್ಯಾಸ ನೀಡಬೇಕು ಎಂದು ಸಲಹೆ ನೀಡಿದರು.

ತಾಲೂಕು ಆಡಳಿತದ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕವಾಗಿ ಬಸವಣ್ಣನವರ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಆನಂದ ನಗರದ ಗಣೇಶ ಗುಡಿಯಿಂದ ಬಸವ ಮೂರ್ತಿ ಮೆರವಣಿಗೆ ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣ, ಶಿವಾಜಿ ಸರ್ಕಲ್, ರಾಮದುರ್ಗ ಕ್ರಾಸ್, ಅಂಬೇಡ್ಕರ್ ಸರ್ಕಲ್ ಸುತ್ತುವರಿದು ನಂತರ ಪಿಕಾರ್ಡ್ ಬ್ಯಾಂಕ್ ಆವರಣದವರೆಗೆ ವಿವಿಧ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ಹಮ್ಮಿಕೊಂಡು ಹಳೇ ತಹಸೀಲ್ದಾರ್ ಕಚೇರಿ ಎದುರಿನ ನಗರವನದ ಆವರಣದಲ್ಲಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಯಿತು.

ಇಲ್ಲಿಯ ಪಶು ಆಸ್ಪತ್ರೆಯ ಆವರಣದಲ್ಲಿ ಏಕದಂತ ಸೇವಾ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಸಮಿತಿ ಸದಸ್ಯರು ತಿಳಿಸಿದರು.

ಸರ್ಕಾರದಿಂದ ಕೊಡಮಾಡುವ ಅನುದಾನ ಕಡಿಮೆಯಾಗಿದ್ದು, ಬರುವ ವರ್ಷದಿಂದ ಹೆಚ್ಚಿನ ಅನುದಾನ ಕೊಡಬೇಕು ಎಂದು ಉಪತಹಸೀಲ್ದಾರ್ ವಿದ್ಯಾನಂದ ಜಾಧವ ಅವರಿಗೆ ಬಸವಾಭಿಮಾನಿಗಳು ಮನವಿ ಸಲ್ಲಿಸಿದರು. ಮನವಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಾಧವ ಹೇಳಿದರು.

ಪಶು ವೈದ್ಯಾಧಿಕಾರಿ ಡಾ. ಶ್ರೀಕಾಂತ ಸಬ್ನಿಸ್, ಎನ್.ಬಿ. ಮಲ್ಲಾರ, ಆರ್.ಬಿ. ಸಂಕದಾಳ, ಗಣೇಶ ಕುಬಸದ, ಕೆ.ವಿ. ಮ್ಯಾಗೇರಿ, ಎಂ.ಎಸ್. ಹಿರೇಹಾಳ, ಚನ್ನಪ್ಪ ಅಥಣಿ, ಎಂ.ಬಿ. ಮಹಾಲಿಂಗಪುರ, ನಾಗರಾಜ ಕಾಚೆಟ್ಟಿ, ಸುರೇಶ ಹೆಬ್ಬಳ್ಳಿ, ಚಂದ್ರ ಕಾಚೆಟ್ಟಿ, ಎಸ್.ಡಿ. ರೋಣದ, ರಾಮಣ್ಣ ಬಂಡಿವಡ್ಡರ, ಎಸ್.ಎಸ್. ಕಿತ್ತಲಿ, ಜಂಬಯ್ಯ ಪೂಜಾರ, ಸಿದ್ದಯ್ಯ ಹಿರೇಮಠ, ಚಂದ್ರು ಸೂಡಿ, ಶರಣಪ್ಪ ಮಾವಿನಮರದ, ಸತೀಶ ಹಂಜಿ, ರವಿ, ಸಂಜು ಬರಗುಂಡಿ, ಶಿವು ಜಿಗಬಡ್ಡಿ, ಹೊಳಬಸು ಲೋಕಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net