ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

5jyp1
ಜಯಪುರ-ಚೌಡಿಕಟ್ಟೆ-ಅಲಗೇಶ್ವರ ರಸ್ತೆ ದುರಸ್ತಿಗೆ ಆಗ್ರಹಿಸಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರಾದ ಹರೀಶ್ ವಿನಾಯಕನಗರ, ಮಾನಪ್ಪಗೌಡ, ಮಂಜುನಾಥ್ ಇತರರು.
Published on

ಜಯಪುರ: ಜಯಪುರ ಗ್ರಾಪಂ ವ್ಯಾಪ್ತಿಯ ಜಯಪುರ-ಚೌಡಿಕಟ್ಟೆ-ಅಲಗೇಶ್ವರ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಸಭೆ ನಡೆಸಿದರು. ಈ ಹಿಂದೆ ನಡೆದ ರಸ್ತೆ ಹೋರಾಟ ಸಮಿತಿ ಸಭೆಯಲ್ಲಿ ಶಾಸಕ ರಾಜೇಗೌಡ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ರಸ್ತೆ ಕಾಮಗಾರಿಗೆ 3 ಕೋಟಿ ರೂ. ಹಣ ಮೀಸಲಿಟ್ಟಿದ್ದು, ಚುನಾವಣೆ ಮುಗಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದರು. ಆದರೆ ಚುನಾವಣೆ ಮುಗಿದು ಏಳೆಂಟು ತಿಂಗಳಾದರೂ ರಸ್ತೆ ಕಾಮಗಾರಿ ನಡೆಸದಿರುವುದರಿಂದ ಮುಂದಿನ ಲೋಕಸಭೆ ಚುನಾವಣೆ ಬಹಿಷ್ಕರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಖಂಡರಾದ ಹರೀಶ್ ವಿನಾಯಕನಗರ, ಮಾನಪ್ಪಗೌಡ, ಮಂಜುನಾಥ್, ರಮೇಶ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net