ಲಕ್ಷ್ಮೀನಾರಾಯಣ ಕೆರೆ ಅಭಿವೃದ್ಧಿಗೆ ನಿರ್ಧಾರ

ಗಂಗಾವತಿ ತಾಲೂಕಿನ ಸಂಗಾಪುರದ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮಿನಾರಾಯಣ ಕೆರೆ ಅಭಿವೃದ್ಧಿಗೆ ಸಮಾನ ಮನಸ್ಕರರು ಮತ್ತು ಜಲತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿತು. ಜಲತಜ್ಞ ಆನಂದ ಮಲ್ಲಿಗೆವಾಡಾ, ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್, ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಕಮರ್‌ಪಾಶಾ ಇತರರಿದ್ದರು.

Published on

ಗಂಗಾವತಿ: ತಾಲೂಕಿನ ಸಂಗಾಪುರದ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮಿನಾರಾಯಣ ಕೆರೆ ಅಭಿವೃದ್ಧಿಗೆ ಸಮಾನ ಮನಸ್ಕರ ತಂಡ ಸಜ್ಜಾಗಿದ್ದು, ಕೈಗೆತ್ತಿಕೊಳ್ಳಬೇಕಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಶನಿವಾರ ಚರ್ಚಿಸಲಾಯಿತು.

13ನೇ ಶತಮಾನದಲ್ಲಿ ಕೆರೆ ನಿರ್ಮಾಣವಾಗಿದ್ದು, ಸುತ್ತಲೂ ಗುಡ್ಡ ಆವರಿಸಿಕೊಂಡಿದೆ. 2ಸಾವಿರ ಹೆಕ್ಟರ್ ಕೃಷಿ ಭೂಮಿಗಾಗುವಷ್ಟು ನೀರಿನ ಸಾಮರ್ಥ್ಯ ಹೊಂದಿರುವ ಕೆರೆ ಅಭಿವೃದ್ಧಿಗೆ ಚಾರಣ ಬಳಗ ಮತ್ತು ಶ್ರೀ ಲಕ್ಷ್ಮಿನಾರಾಯಣ ಕೆರೆ ಅಭಿವೃದ್ಧಿ ಸಂಘ ನಿರ್ಧರಿಸಿವೆ. ಜಲತಜ್ಞ ಆನಂದ ಮಲ್ಲಿಗೆವಾಡಾ ನೇತೃತ್ವ ಸರ್ವೆ ತಂಡ ಮೊದಲ ಹಂತದಲ್ಲಿ ಕೆರೆಯನ್ನು ವೀಕ್ಷಿಸಿದ್ದು, ಅಭಿವೃದ್ಧಿ ಕುರಿತು ಸ್ಥಳೀಯ ರೈತರಿಂದ ಮಾಹಿತಿ ಸಂಗ್ರಹಿಸಲಾಯಿತು. ಅಂತರ್ಜಲ ಮಟ್ಟ ಹೆಚ್ಚಳದ ಜತೆಗೆ ಪ್ರವಾಸೋದ್ಯಮಕ್ಕೆ ಪೂರಕ ಯೋಜನೆಗಳ ಜಾರಿಗೆ ನಿರ್ಧರಿಸಲಾಯಿತು. ನೀಲಿನಕ್ಷೆ ರೂಪಿಸಲು ತಂಡಕ್ಕೆ ಅವಕಾಶ ನೀಡಲಾಯಿತು.

ಜಲತಜ್ಞ ಆನಂದ ಮಲ್ಲಿಗೆವಾಡಾ ಮಾತನಾಡಿ, ಕೆರೆ ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಮುಖ್ಯವಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಳದ ಜತೆಗೆ ಮಾದರಿ ಕೆರೆಯನ್ನಾಗಿ ಪರಿವರ್ತಿಸಲಾಗುವುದು. ಜನ ಮತ್ತು ಜಾನುವಾರುಗಳಿಗೆ ಪೂರಕ ಯೋಜನೆ ರೂಪಿಸಲಾಗುವುದು ಎಂದರು.

ಚಾರಣ ಬಳದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್, ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಕಮರ್‌ಪಾಷಾ, ಸದಸ್ಯರಾದ ಕರೀಂಸಾಬ್, ತಾಳೂರಿ ಸತ್ಯಶೇಖರ್, ಹರನಾಯಕ, ಪ್ರಹ್ಲಾದಕುಲ್ಕರ್ಣಿ, ಇಂಜಿನಿಯರ್ ಅಭಿಷೇಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net