

ರಬಕವಿ/ಬನಹಟ್ಟಿ: ರಬಕವಿ ನಗರದಲ್ಲಿ ನ. 1 ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ಸ್ಥಳೀಯ ಶಂಕರಲಿಂಗ ದೇವಸ್ಥಾನದಲ್ಲಿ ಮಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಅಂದು ಬೆಳಗ್ಗೆ 9 ಗಂಟೆಗೆ ರಬಕವಿ ಹಳೇ ಬಸ್ ನಿಲ್ದಾಣ ಬಳಿಯ ಬಾಲಿಕೆಯರ ಪ್ರೌಢಶಾಲೆ ಆವರಣದಲ್ಲಿನ ಭವ್ಯ ಅಲಂಕೃತ ವೇದಿಕೆಯಲ್ಲಿ ನಾಡದೇವಿ ಶ್ರೀ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾಮೂಹಿಕ ನಾಡಗೀತೆ ಮತ್ತು ವಿವಿಧ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ನಿರ್ಣಯಿಸಲಾಯಿತು.
ಚಿದಾನಂದ ಸೊಲ್ಲಾಪೂರ, ಎಂ.ಎಸ್. ಬದಾಮಿ, ಈರಣ್ಣ ಗುಣಕಿ, ಸಾಗರ ನಿಪ್ಪಾಣಿ, ರವೀಂದ್ರ ಅಷ್ಟಗಿ, ಸಿದ್ದಣ್ಣ ಮೇಣಿ, ಸುಭಾಷ್ ಮಧುರಖಂಡಿ, ಬಾಬು ಗಂಗಾವತಿ, ಶ್ರೀಶೈಲ ಬುರ್ಲಿ, ಯಶವಂತ ವಾಜಂತ್ರಿ, ಪ್ರಕಾಶ ಸುಢಾಳ, ಬಸವರಾಜ ಮಟ್ಟಿಕಲ್ಲಿ, ಸಂಜಯ ಮಹೇಂದ್ರಕರ, ಪ್ರಕಾಶ ಕುಂಬಾರ, ಯಾಸಿನ್ ಕಾರುಬಾರಿ ಇತರರಿದ್ದರು.