ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ನಿರ್ಧಾರ

RBK 28-1 MEETING
ರಬಕವಿ ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಗಿರೀಶ ಸ್ವಾದಿ ಮಾತನಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಅವಳಿ ನಗರದ ಹಿರಿಯರು ಇದ್ದರು.
Published on

ರಬಕವಿ/ಬನಹಟ್ಟಿ: ಕನ್ನಡನಾಡಿನ ಸಾಂಸ್ಕೃತಿಕ ಪರಂಪರೆ ಸ್ಮರಿಸುವ ಮೂಲಕ ಇಂದಿನ ಯುವಪೀಳಿಗೆಗೆ ನಾಡಿನ ಶ್ರೇಷ್ಠತೆ ಬಗ್ಗೆ ಹೆಮ್ಮೆ ಮೂಡಿಸುವುದು ಅಗತ್ಯವಾಗಿದೆ ಎಂದು ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ಹೇಳಿದರು.

ರಬಕವಿ ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಚೇರಿಯಲ್ಲಿ ಭುವನೇಶ್ವರಿ ಭಾವಚಿತ್ರ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ರಬಕವಿ ರಾಜ್ಯೋತ್ಸವ ಆಚರಣಾ ಸಮಿತಿ ಆಯೋಜಿಸಿದ ಹಳೇ ಬಸ್‌ನಿಲ್ದಾಣ ಬಳಿಯ ಬಾಲಿಕೆಯರ ಪ್ರೌಢಶಾಲೆ ಎದುರಿನ ವೇದಿಕೆಗೆ ತೆರಳಲಾಗುವುದು. ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ವಿವಿಧ ಹೊಣೆಗಾರಿಕೆ ವಹಿಸಲಾಯಿತು. ಮೆರವಣಿಗೆ ಸಾಗುವ ಮತ್ತು ಸಮಾರಂಭ ನಡೆಯುವ ಪ್ರದೇಶಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ನಗರಸಭೆ ಸಿಬ್ಬಂದಿಗೆ ಸೂಚಿಸಲಾಯಿತು.

ಪ್ರಮುಖ ಶಾಲೆಗಳನ್ನು ಸಂಪರ್ಕಿಸಿ ನಾಡಿನ ಪ್ರಮುಖ ಹೋರಾಟಗಾರರ ಮತ್ತು ಸಾಧಕರ ರೂಪಕಗಳನ್ನು ನಿರ್ವಹಿಸಲು ಶಾಲಾ ಶಿಕ್ಷಣ ಇಲಾಖೆಯ ಬಿ.ಎಂ. ಹೊಸಮನಿ, ಅರ್ಜುನ ಕಾಖಂಡಕಿಗೆ ಸೂಚಿಸಲಾಯಿತು. ರೂಪಕಗಳನ್ನು ಮೆರವಣಿಗೆಯುದ್ದಕ್ಕೂ ಸಾಗಿಸಲು ವಾಹನದ ವ್ಯವಸ್ಥೆ ಮಾಡಬೇಕು. ಅಲ್ಲದೆ, ವೇದಿಕೆಯಲ್ಲಿ ಸರ್ಕಾರದ ಹಿಂದಿನ ಸುತ್ತೋಲೆಯಂತೆ 5 ಕನ್ನಡದ ನಾಡಗೀತೆಗಳನ್ನು ಕಡ್ಡಾಯವಾಗಿ ಹಾಡಿಸಲು ತಿಳಿಸಲಾಯಿತು.

ತಾಪ ಕಾರ್ಯನಿರ್ವಹಣಾಧಿಕಾರಿ ಸಿದ್ದಪ್ಪ ಪಟ್ಟಿಹಾಳ, ನಗರಸಭೆ ಸಿಬ್ಬಂದಿ ಮುಖೇಶ ಬನಹಟ್ಟಿ, ಚಿದಾನಂದ ಸೊಲ್ಲಾಪುರ, ಶಿವಾನಂದ ಬಾಗಲಕೋಟಮಠ, ಪೊಲೀಸ್ ಇಲಾಖೆಯ ಎಎಸ್‌ಐ ಕೆ. ಶಿವಣ್ಣ, ಕೆ.ಪಿ. ಸವದತ್ತಿ, ಎಸ್.ಎಂ. ಕುಂಬಾರ, ಮ.ಕೃ. ಮೇಗಾಡಿ, ಕನ್ನಡಪರ ಸಂಘಟನೆಗಳ ಮುಖಂಡರಾದ ರಾಜೇಶ್ವರಿ ಹಿರೇಮಠ, ಸುರೇಶ ಗೋಕಾಂವಿ, ಬಸೀರ ಜಮಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net