ಇನ್ಪೈರ್ ಮಾನಕ್ ಅವಾರ್ಡ್ಸ್ ಸ್ಪರ್ಧೆಗೆ ದೇಚಮ್ಮ ಆಯ್ಕೆ

decgamma
Published on

ಮಡಿಕೇರಿ: ಕೊಡಗು ವಿದ್ಯಾಲಯ ಶಾಲೆಯಲ್ಲಿ ೨೦೨೨-೨೩ರ ಸಾಲಿನಲ್ಲಿ ೧೦ನೇ ತರಗತಿ ಓದುತ್ತಿದ್ದ ಎಂ.ಎಸ್.ದೇಚಮ್ಮ ಅವರು, ವಿಜ್ಞಾನ ಶಿಕ್ಷಕಿ ಪಿ.ಎಸ್.ಪೊನ್ನಮ್ಮ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ಓವರ್ ಹೆಡ್ ಟ್ಯಾಂಕ್ ಕ್ಲಿನರ್ ಪರಿಕಲ್ಪನೆಯು ರಾಷ್ಟ್ರೀಯ ಮಟ್ಟದ ಇನ್ಪೆರ್ ಮಾನಕ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದೆ.


ವಿದ್ಯಾರ್ಥಿನಿ ದೇಚಮ್ಮ ಮಂಡಿಸಿದ ಈ ಪರಿಕಲ್ಪನೆಯ ಸಾಧನವು ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ದೈನಂದಿನ ಜೀವನದಲ್ಲಿ ಸೃಜನ ಶೀಲ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಕೂಡ ಇದು ಹೊಂದಿದೆ. ದೇಚಮ್ಮ ಅವರು ಪ್ರಸ್ತುತ ನಳಂದ ಗುರುಕುಲ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ, ಪರಿಕಲ್ಪನೆಯು ಯಶಸ್ಸುಗಳಿಸಲು ಬೆನ್ನೆಲುಬಾಗಿ ಸಹಕರಿಸಿದ ಮಾರ್ಗದರ್ಶಕರು, ಕೊಡಗು ವಿದ್ಯಾಲಯ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ಕುಟುಂಬದವರು ಹಾಗೂ ಗೆಳೆಯರ ಸಹಾಯವನ್ನು ದೇಚಮ್ಮ ಸ್ಮರಿಕೊಳ್ಳುತ್ತಾರೆ.


ಈಕೆ ಅರ್ಪಟ್ಟು ಮುಕ್ಕಾಟ್ಟಿರ ಪಿ.ಸುಬ್ರಮಣಿ ಮತ್ತು ಅಂಜು ಸುಬ್ರಮಣಿ ಇವರ ಪುತ್ರಿಯಾಗಿದ್ದಾರೆ. ಈಕೆ ದಿನಾಂಕ ಸೆ.೧೭ ಮತ್ತು ೧೮ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುವ ೧೧ನೇ ರಾಷ್ಟ್ರ ಮಟ್ಟದ ಪ್ರದರ್ಶನ ಮತ್ತು ಯೋಜನಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net