ಲಾಭದಾಸೆ ತೋರಿಸಿ ವಂಚನೆ

cybe crime
Published on

ಹುಬ್ಬಳ್ಳಿ: ವ್ಯಾಪಾರ-ವಹಿವಾಟು ನಡೆಸಿದರೆ ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರಿಬ್ಬರು ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 13.14 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ನಗರದ ಎಂ. ರಮೇಶ ವಂಚನೆಗೆ ಒಳಗಾದವರು. ರಾಜೇಶ ಕನಕವೆಲೆ, ಪೂಜಾ ಎಸ್. ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಾಟ್ಸ್‌ಆ್ಯಪ್ ಗ್ರುಪ್‌ಗೆ ಸೇರಿಸಿದ ವಂಚಕರು, ವಿವಿಧ ಲಾಭದ ಆಮಿಷವೊಡ್ಡಿ ಒಟ್ಟು 13,14,938 ರೂ. ಆನ್‌ಲೈನ್ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ರಮೇಶ ಅವರು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net