

ನೆಲಮಂಗಲ: ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಫೋಟೋಗ್ರಾಫರ್‌ನನ್ನು ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನಗರದ ಸುಭಾಷ್ ನಗರ ನಿವಾಸಿ ಮಧು (32) ಬಂಧಿತ.
ಘಟನೆ ಹಿನ್ನೆಲೆ: ಮೂರು ವರ್ಷದ ಹಿಂದೆ ಕಾರ್ಯಕ್ರಮವೊಂದರ ೆಟೋ ತೆಗೆಯಲು ಹೋಗಿದ್ದಾಗ ಆರೋಪಿಗೆ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಬಳಿಕ ಯುವತಿ ಮನೆಗೆ ಬಂದು ಮಗಳನ್ನು ಮದುವೆ ಆಗುತ್ತೇನೆ ಎಂದು ಹೇಳಿ ಒಪ್ಪಿಸಿದ್ದ ಆರೋಪಿ, ನನ್ನ ತಾಯಿಗೆ ಅನಾರೋಗ್ಯವಿದ್ದು, ಸರಿ ಹೋದ ಬಳಿಕ ಮದುವೆಯಾಗುವುದಾಗಿ ಹೇಳಿದ್ದ ವಂಚಕ ಮದುವೆ ಮುಂದೂಡಿದ್ದಾನೆ. 2024ರ ಆಗಸ್ಟ್‌ನಲ್ಲಿ ಯುವತಿ ಮನೆಗೆ ಬಂದ ಆರೋಪಿ ಯಾರೂ ಇಲ್ಲದ ವೇಳೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡಿಕೊಂಡಿದ್ದಾನೆ. ಬಳಿಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ, ಕಳೆದ ನಾಲ್ಕು ತಿಂಗಳಿನಿಂದಲೂ ಲಾಡ್ಜ್ ಮತ್ತು ಹೆಸರಘಟ್ಟ ಬಳಿಯಿರುವ ರೂಂಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ.
ಕೊಲೆ ಬೆದರಿಕೆ: ಆರೋಪಿ ಮಧು ಮೈಸೂರು ಮೂಲದ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿದ್ದಾನೆ. ಈ ಬಗ್ಗೆ ತಿಳಿದ ಯುವತಿ, ಆರೋಪಿಯನ್ನು ಪ್ರಶ್ನಿಸಿದ್ದು, ನಾನು ನಿನ್ನನ್ನು ಮದುವೆಯಾಗುವುದಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಜ.2 ರಂದು ನಗರ ಪೊಲೀಸ್ ಠಾಣೆಯಲ್ಲಿ ಯುವತಿ, ಮಧು ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದು, ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಶಶಿಧರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತಲೆ ಮರೆಸಿಕೊಂಡಿರುವ ಕುಟುಂಬಸ್ಥರಿಗೆ ಶೋಧ ಕಾರ್ಯ ಮುಂದುವರಿದಿದೆ.
ಅಅಪಘಾತದಲ್ಲಿ ಗಾಯಗೊಂಡವರು ಸಾವುದೊಡ್ಡಬಳ್ಳಾಪುರ: ನಗರದ ಕಚೇರಿಪಾಳ್ಯದ ಶಾಂತಿನಗರದ ರಸ್ತೆಯಲ್ಲಿ ಜ.1ರ ನಡುರಾತ್ರಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಶಿವಕುಮಾರ್ (38) ಜ.2 ರಂದು ಮೃತಪಟ್ಟರೆ, ಎಂ.ಗಜೇಂದ್ರ (42) ಶುಕ್ರವಾರ ಮೃತಪಟ್ಟಿದ್ದಾರೆ. ಇಬ್ಬರ ತಲೆಗೂ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಕೋಮಾದಲ್ಲಿದ್ದರು. ಮೃತರು ನಗರದ ಕಚೇರಿ ಪಾಳ್ಯದ ನಿವಾಸಿಗಳಾಗಿದ್ದು, ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ಮನೆಗೆ ತೆರಳುವ ವೇಳೆ ಎದುರಿಗೆ ಬಂದ ಅರೇಹಳ್ಳಿ ಗುಡ್ಡದಹಳ್ಳಿಯ ನಿವಾಸಿ ಪ್ರಮೋದ್ ಎಂಬಾತನ ಬೈಕ್ ನಡುವೆ ಡಿಕ್ಕಿ ಸಂಭವಿಸಿತ್ತು. ಪ್ರಮೋದ್‌ಗೂ ತೀವ್ರ ಸ್ವರೂಪದ ಗಾಯಗ ಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ಗಜೇಂದ್ರನ ಅಂಗಾಂಗ ಗಳನ್ನು ಕುಟುಂಬಸ್ಥರು
ದಾನ ಮಾಡಿದ್ದಾರೆ.
ಮನೆಗಳ್ಳರ ಬಂಧನ, 8.23 ಲಕ್ಷ ಮೌಲ್ಯದ ಚಿನ್ನ ವಶಆನೇಕಲ್: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಹೆಬ್ಬಗೋಡಿ ಪೊಲೀಸರು, 8.23 ಲಕ್ಷ ಮೌಲ್ಯದ 81 ಗ್ರಾಂ ಚಿನ್ನ, ಬೆಳ್ಳಿ ಒಡವೆ, ಲ್ಯಾಪ್‌ಟಾಪ್, ಡಿಎಸ್‌ಎಲ್ಆರ್ ಕ್ಯಾಮರಾ, ಎರಡು ಮೊಬೈಲ್ ಹಾಗೂ ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರವಾಹನ ಮತ್ತು ಮಾರಕಾಸ್ತ್ರ ವಶಕ್ಕೆ ಪಡೆದಿದ್ದಾರೆ. ನೇಪಾಳದ ಭಜರಂಗ ಜಿಲ್ಲೆಯ ಬರ್ಜಾ ಬಹದ್ದೂರ್ ಬೋರ್ಹ(38), ವಿಜಯ್ ಸಿಂಗ್(31) ಹಾಗೂ ಸೌತ್ ಬಿನ್(28) ಬಂಧಿತರು. ಹಾರೋಹಳ್ಳಿಯ ಎಸ್‌ಆರ್‌ಎಸ್ ಬಡಾವಣೆಯ ಒಂಟಿ ಮನೆಗೆ 29ರಂದು ನುಗ್ಗಿದ್ದ ಖದೀಮರು, ಮನೆಯಲ್ಲಿದ್ದ 56 ಗ್ರಾಂ ಚಿನ್ನಾಭರಣ ಹಾಗೂ ಕ್ಯಾಮರಾ ಕಳ್ಳತನ ಮಾಡಿದ್ದರು. ಪ್ರಕರಣ ಸಂಬಂಧ ಹೆಬ್ಬಗೋಡಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್, ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್ ಪಿಎಸ್‌ಐ ನಾಗರಾಜು, ಸಿಬ್ಬಂದಿ ಗಿರೀಶ್, ಪ್ರಭುಕುಮಾರ್, ಶಿವಪ್ರಕಾಶ್, ದರೆಪ್ಪ ಪಾಟೀಲ್, ಪ್ರವೀಣ್ ನಾಯಕ್ ಇದ್ದರು.