ಹೆತ್ತವರ ಋಣ ತೀರಿಸಬೇಕು

18
ಪಾರಮಾರ್ಥಿಕ ಸಪ್ತಾಹದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಬಂಡಿಗಣಿ ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿದರು. ಕಾಂತು ಬಾಡಗಿ, ಬಸವರಾಜ ಕೊಣ್ಣೂರಿ, ಶ್ರೀಕಾಂತ ಚೌಗಲಾ ಇತರರಿದ್ದರು.
Published on

ಪರಮಾನಂದವಾಡಿ: ಮಾನವ ಜನ್ಮ ಪರಮ ಶ್ರೇಷ್ಠವಾದದ್ದು, ತಂದೆ-ತಾಯಿ ಕಣ್ಮುಂದೆ ಕಾಣುವ ಪ್ರತ್ಯಕ್ಷ ದೇವರು, ಅವರ ಋಣ ತೀರಿಸಲು ಸಂಕಲ್ಪ ತೊಡಬೇಕು ಎಂದು ಬಂಡಿಗಣಿ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.

ಗ್ರಾಮದ ತೋಟದಲ್ಲಿರುವ ಬಂಡಿಗಣಿ ಶಾಖಾ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ 28ನೇ ಪಾರಮಾರ್ಥಿಕ ಸಪ್ತಾಹದ ಕಾರ್ಯಕ್ರಮದ ಮಂಗಲೋತ್ಸವದಲ್ಲಿ ಅವರು ಮಾತನಾಡಿದರು.

ಗೋಹತ್ಯೆ, ಶಿಶು ಹತ್ಯೆ, ಸೀ ಹತ್ಯೆ, ಅತ್ಯಾಚಾರ ಕೊಲೆ-ಸುಲಿಗೆ ನಿಲ್ಲಬೇಕು. ಮನಸ್ಸಿಗೆ ಬೇಸರವಾದಾಗ ದೇವರ ಧ್ಯಾನ ಮಾಡಬೇಕು ಎಂದರು. ಶಾಲಾ ಮಕ್ಕಳಿಂದ ನಾಟಕ ಪ್ರದರ್ಶನವಾಯಿತು.

ಮಂಗಲೋತ್ಸವಕ್ಕೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣಗಳಿಂದ 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿದ್ದರು. ಕಾಂತು ಬಾಡಗಿ, ಬಸವರಾಜ ಕೊಣ್ಣೂರಿ, ಶ್ರೀಕಾಂತ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net