ಸಾಲಬಾಧೆಯಿಂದ ರೈತ ಆತ್ಮಹತ್ಯೆ

farmer-hanging-1455204489_835x547
Published on

ನವಲಗುಂದ: ರೈತನೊಬ್ಬ ಸಾಲಬಾಧೆ ತಾಳದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಹದ್ದಿನಲ್ಲಿ ಗುರುವಾರ ನಡೆದಿದೆ.

ತಾಲೂಕಿನ ಹೆಬ್ಬಾಳ ಗ್ರಾಮದ ಯಲ್ಲಪ್ಪ ಭೀಮಪ್ಪ ಉದಪುಡಿ (53) ಆತ್ಮಹತ್ಯೆ ಮಾಡಿಕೊಂಡ ರೈತ. ಈತ 18 ಎಕರೆ ಜಮೀನು ಹೊಂದಿದ್ದು, ಹತ್ತು ವರ್ಷದ ಹಿಂದೆ ಅಳಗವಾಡಿ ಕೆವಿಜಿ ಬ್ಯಾಂಕ್‌ನಲ್ಲಿ 1.60 ಲಕ್ಷ, ಹೆಬ್ಬಾಳ ಸೊಸೈಟಿಯಲ್ಲಿ 1.15 ಲಕ್ಷ ರೂ. ಬೆಳೆಸಾಲ ಮಾಡಿದ್ದ.

ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರೈತನಿಗೆ ಪತ್ನಿ, ಪುತ್ರ, ಮೂವರು ಪುತ್ರಿಯರು ಇದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net