ಸಾಲಬಾಧೆಯಿಂದ ರೈತ ಆತ್ಮಹತ್ಯೆ

Former Suicide 1
Published on

ಮಾಂಜರಿ: ಸಾಲಬಾಧೆ ತಾಳಲಾರದೆ ರೈತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಮಾಂಜರಿ ಗ್ರಾಮದ ಅಬ್ಬಾಸ್ ಬಾಬಾಜಿ ಮುಲ್ಲಾ ಅತ್ಮಹತ್ಯೆಗೆ ಶರಣಾದ ರೈತ. ಈತ ವ್ಯವಸಾಯಕ್ಕಾಗಿ ಗ್ರಾಮದ ವಿವಿಧ ಸಹಕಾರಿ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸುಮಾರು 10 ಲಕ್ಷ ರೂ.ಸಾಲ ಪಡೆದಿದ್ದ ಎನ್ನಲಾಗಿದೆ.

ಕೃಷ್ಣಾ ನದಿ ಪ್ರವಾಹದಿಂದ ಕೃಷಿಯಲ್ಲಿ ಅಪಾರ ಹಾನಿಯಾಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net