

ನಂದೇಶ್ವರ: ಸಮೀಪದ ಸವದಿ ಗ್ರಾಮದ ರೈತ ಸಾಲ ಬಾಧೆ ತಾಳದೆ ಗುರುವಾರ ನೇಣಿಗೆ ಶರಣಾಗಿದ್ದಾನೆ. ಮಹಾಂತೇಶ ಭೀಮಪ್ಪ ಹೂನ್ನೂರ (44) ಮೃತ ರೈತ. 1 ಎಕರೆ 30 ಗುಂಟೆ ಜಮೀನು ಹೊಂದಿರುವ ರೆತ ವಿವಿಧ ಖಾಸಗಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು, ಫೈನಾನ್ಸ್, ಕೆಗಡ ಸೇರಿ 28 ಲಕ್ಷ ರೂ.ಗೂ ಅಕ ಸಾಲ ಮಾಡಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಾಡಿರುವ ಸಾಲ ತೀರಿಸುವುದು ಹೇಗೆಂದು ಚಿಂತಿತನಾಗಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ, ತಾಯಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.