

ರಾಣೆಬೆನ್ನೂರ: ಸಾಲಬಾಧೆಯಿಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ನದಿಹರಳಹಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಮಂಜುನಾಥ ಹನುಮಂತಪ್ಪ ಚೌಡಕ್ಕನವರ (43) ಮೃತ ರೈತ.
ಇವರು 3 ಎಕರೆ ಜಮೀನು ಹೊಂದಿದ್ದು ಬ್ಯಾಂಕ್ನಲ್ಲಿ 4 ಲಕ್ಷ ರೂ. ಬೆಳೆಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಬೆಳೆದಿದ್ದ ಬೆಳೆ ಸಂರ್ಪೂಣ ಹಾಳಾಗಿ ಹೋಗಿತ್ತು. ಇದರಿಂದ ಸಾಲ ತೀರಿಸಲಾಗದೆ ಮನನೊಂದು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತರಿಂದ ಪ್ರತಿಭಟನೆ...
ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯ ಆವರಣದ ಶವಾಗಾರದ ಎದುರು ಮೃತ ರೈತನ ಶವವಿಟ್ಟು ರೈತರು ಪ್ರತಿಭಟನೆ ನಡೆಸಿದರು. ರೈತರಿಗೆ ಓಟಿಎಸ್ ಮೂಲಕ ಸಾಲ ತುಂಬಲು ಅವಕಾಶ ಮಾಡಿಕೊಡಬೇಕು. 5 ಲಕ್ಷ ರೂ. ಇರುವ ಪರಿಹಾರವನ್ನು 25 ಲಕ್ಷ ರೂ.ಗೆ ಏರಿಕೆ ಮಾಡಬೇಕು. ಮೃತ ರೈತನ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದರು. ಟನಾ ಸ್ಥಳಕ್ಕೆ ಬಂದ ಕಂದಾಯ ನಿರೀಕ್ಷಕ ವಾಗೀಶ ಮಳಿಮಠ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತರಾದ ರವೀಂದ್ರಗೌಡ ಪಾಟೀಲ, ಕರೇಗೌಡ ಬಾಗೂರು, ಚಂದ್ರಣ್ಣ ಬೇಡರ, ಕರಬಸಪ್ಪ ಕೂಲೇರ, ನಾಗರಾಜ ಅಂಬ್ಲಿ, ಕರೆಯಪ್ಪ ಜೋಗೇರ, ಜಗದೀಶ ಕೋಟೆಗೌಡ್ರ, ಹನುಮಂತಪ್ಪ ಪವಾರ, ಮಾರುತಿ ತಳವಾರ, ಮಂಜಪ್ಪ ಬಜಾರಿ, ಗಂಗಾಧರ ಬೂದನೂರು ಮತ್ತಿತರರು ಪಾಲ್ಗೊಂಡಿದ್ದರು.