ಸಾಲಬಾಧೆಯಿಂದ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

Formar Suside+1
Published on

ರಾಣೆಬೆನ್ನೂರ: ಸಾಲಬಾಧೆಯಿಂದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಹರೀಶ ತಿರುಕಪ್ಪ ನ್ಯಾಮತಿ (29) ಮೃತ ರೈತ.

ಇವರು 4.24 ಎಕರೆ ಜಮೀನು ಹೊಂದಿದ್ದು ಕೃಷಿಗಾಗಿ ಬ್ಯಾಂಕ್​ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ 11.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ, ಜಮೀನಿನಲ್ಲಿ ಬೆಳೆದಿದ್ದ ಬೆಳೆ ಸಂರ್ಪೂಣ ಹಾಳಾಗಿ ಹೋಗಿತ್ತು. ಇದರಿಂದ ಸಾಲತೀರಿಸಲಾಗದೆ ಮನನೊಂದು ಜಮೀನಿನಲ್ಲಿಯೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net