ಸಾಲಬಾಧೆಯಿಂದ ನುಸಿ ಗುಳಿಗೆ ತೆಗೆದುಕೊಂಡು ರೈತ ಆತ್ಮಹತ್ಯೆ

Crime Logo
Published on

ಹಾವೇರಿ: ಸಾಲಬಾಧೆಯಿಂದ ರೈತರೊಬ್ಬರು ನುಸಿ ಗುಳಿಗೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುತ್ತಲ ತಾಂಡಾದಲ್ಲಿ ಸೋಮವಾರ ನಡೆದಿದೆ.
ಈರಪ್ಪ ಹನುಮಂತಪ್ಪ ಲಮಾಣಿ (33) ಮೃತ ರೈತ.
ಇವರು ಟ್ರಾೃಕ್ಟರ್ ಹಾಗೂ ಬೆಳೆಗಾಗಿ ಬ್ಯಾಂಕ್ ಮತ್ತು ವಿವಿಧ ಸಂಘಗಳಲ್ಲಿ 3.90 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಮಳೆ ಕೊರತೆಯಿಂದ ಬೆಳೆ ಸರಿಯಾಗಿ ಬಾರದ ಕಾರಣ ಮನೆಯಲ್ಲಿಯೆ ನುಸಿ ಗುಳಿಗೆಗಳನ್ನು ತೆಗೆದುಕೊಂಡು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net