ಸಾಲ ಮರುಪಾವತಿಸಲಾಗದೆ ರೈತ ಆತ್ಮಹತ್ಯೆ

SUCIDE
Published on

ಬೆಳಗಾವಿ: ಖಾನಾಪುರ ತಾಲೂಕಿನ ಬೀದರವಾಡಿಯಲ್ಲಿ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಲಪ್ಪ ಅಪ್ಪಾಜಿ ಪಾಟೀಲ (70) ಆತ್ಮಹತ್ಯೆ ಮಾಡಿಕೊಂವರು.

ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 8 ಲಕ್ಷ ರೂ. ಸಾಲ ಮಾಡಿದ್ದರು. ಆದಾಯವಿಲ್ಲದೆ ಸಾಲ ಪಾವತಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಲಾಕ್‌ಡೌನ್‌ನಿಂದ ಜಮೀನಿನಲ್ಲಿ ಬೆಳದಿದ್ದ ಮೆಣಸಿನಕಾಯಿಗೆ ಯೋಗ್ಯ ಬೆಲೆ ಸಿಗದಿರುವುದು ಮತ್ತು ಮಾರಾಟವಾಗದ ಹಿನ್ನೆಲೆಯಲ್ಲಿ ಬೇಸತ್ತು ಸೋಮವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಖಾನಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಬಂಧನ: ಆಸ್ತಿ ವಿವಾದ ಪ್ರಕರಣ ಸಂಬಂಧ ಟಿಳಕವಾಡಿ ಠಾಣೆ ಪೊಲೀಸರು ಮಂಗಳವಾರ ಇಬ್ಬರನ್ನು ಬಂಧಿಸಿದ್ದಾರೆ. ನಗರದ ಮಂಗಳವಾರ ಪೇಟೆಯ ಗೌಳಿ ಗಲ್ಲಿಯ ನಿವಾಸಿ ಮಹೇಶ ಗೌಳಿ (32), ಶ್ಯಾಮ ಗೌಳಿ (30) ಬಂಧಿತರು. ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಬಂಧಿತರು ಶ್ರೀಕಾಂತ ಗೌಳಿ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕುರಿತು ನೀಡಿದ ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಟಿಳಕವಾಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net