ಸಾಲಬಾಧೆ ತಾಳದೆ ಹೂವಿನಹಡಗಲಿ ತಾಲೂಕಿನಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

Holalu Famer Sucide Pooja Huchhirappa
ಪೂಜಾರ ಹುಚ್ಚೀರಪ್ಪ
Published on

ಹೂವಿನಹಡಗಲಿ: ಸಾಲಬಾಧೆ ತಾಳದೆ ಹೊಳಲು ಗ್ರಾಮದ ರೈತ ಪೂಜಾರ ಹುಚ್ಚೀರಪ್ಪ ತನ್ನ ಜಮೀನಿನಲ್ಲಿ ಭಾನುವಾರ ಸಂಜೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 3.79 ಎಕರೆ ಜಮೀನು ಇದ್ದು, ಕಬ್ಬು ಬೆಳೆದಿದ್ದರು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 2,46,000 ರೂ., ಕರ್ನಾಟಕ ಬ್ಯಾಂಕ್‌ನಲ್ಲಿ 50 ಸಾವಿರ ರೂ. ಜತೆಗೆ ಹೊರಗಡೆ ಐದು ಲಕ್ಷ ರೂ. ಸಾಲ ಪಡೆದಿದ್ದರು. ಬೆಳೆಯು ಹದಕ್ಕೆ ಬಂದಾಗ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿ, ಮಳೆಯಾಗದ ಕಾರಣ ನಿರೀಕ್ಷೆಯಂತೆ ಬೆಳೆ ಬಾರದೆ ಸಾಲಬಾಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬವರು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net