

ದಾವಣಗೆರೆ: ವಂಚಕರು, ಪ್ರಾಧ್ಯಾಪಕರೊಬ್ಬರ ಡೆಬಿಟ್ ಕಾರ್ಡ್‌ನಿಂದ 1.98 ಲಕ್ಷ ರೂ.ಗಳನ್ನು ಲಪಟಾಯಿಸಿದ ಸಂಬಂಧ, ಶನಿವಾರ ಪಿಇಎಸ್ ಅಪರಾಧ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಸಹ ಪ್ರಾಧ್ಯಾಪಕ, ದಾವಣಗೆರೆ ಸರಸ್ವತಿನಗರ ವಾಸಿ ಚಿದಾನಂದ ಎನ್.ಯಮಕ್ಕನವರ ವಂಚನೆಗೆ ಒಳಗಾದವರು.
ಚಿದಾನಂದ ಅವರು, ಸರಸ್ವತಿ ನಗರದ ಬ್ಯಾಂಕ್ ಶಾಖೆಯಲ್ಲಿ ಹೊಂದಿದ್ದ ಉಳಿತಾಯ ಖಾತೆಯಿಂದ ಮೇ 8 ರಿಂದ ಮೂರು ದಿನದ ಅಂತರದಲ್ಲಿ ಹಣ ಕಡಿತವಾಗಿದೆ. ಖಾತೆ ಹಾಗೂ ಡೆಬಿಟ್ ಕಾರ್ಡ್‌ನ ಗೌಪ್ಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಿದ್ದಾಗ್ಯೂ ಈ ವಂಚನೆ ನಡೆದಿದೆ ಎಂದು ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.