ಮನೋರಮಾಬಾಯಿ ಮೋಹನ್‌ ಕುಡತರಕರ್‌ ಫೌಂಡೇಶನ್ ಕಾಲೇಜಿನಲ್ಲಿ ಮಾನವನ ಬದುಕಿನಲ್ಲಿ ಮಾಧ್ಯಮ ಜಾಲಗಳ ಪ್ರಭಾವ ಪರ ವಿರೋದ ಚರ್ಚೆ

DEBATE
Published on

ಗದಗ :ನಗರದ ಪ್ರತಿಷ್ಟಿತ ಸಂಸ್ಥೆಯಾದ ಶ್ರೀಮತಿ ಮನೋರಮಾಬಾಯಿ ಮೋಹನ್‌ ಕುಡತರಕರ್‌ ಫೌಂಡೇಶನ್ ಮನೋರಮಾ ಕಾಲೇಜಿನಲ್ಲಿ ಮಾನವನ ಬದುಕಿನಲ್ಲಿ ಮಾಧ್ಯಮ ಜಾಲಗಳ ಪ್ರಭಾವ ಕುರಿತು ಪರ ವಿರೋದ ಚರ್ಚಾ ಸ್ಪರ್ದೇಯನ್ನು ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ನರಾದ ಎನ್‌ ಎಮ್‌ ಕುಡತರಕರ ರವರು ವಹಿಸಿದ್ದರು. ಪ್ರಾಚಾರ್ಯರಾದ ಶ್ರೀ ಬಿ ಎಸ್‌ ಹಿರೇಮಠ ರವರು ಮಾತನಾಡಿ ಮಾನವನ ಬದುಕಿನಲ್ಲಿ ಮಾಧ್ಯಮ ಜಾಲಗಳ ಪ್ರಭಾವ ಹಾಸು ಹೊಕ್ಕಾಗಿದೆ, ಪರ ವಿರೋದ ಮಾತನಾಡುವ ವಿದ್ಯಾರ್ಥಿಗಳು ಸ್ವಾರಸ್ಯಕರವಾಗಿ ಮಾತನಾಡಿ ಸ್ಪರ್ದೇಯಲ್ಲಿ ಪಾಲ್ಗೊಳ್ಳಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಜ್ಞಾನ ವಿಕಾಸಕ್ಕೆ ಇಂತಹ ಸ್ಪರ್ದೇಗಳು ಅವಶ್ಯಕವಾಗಿವೆ ಎಂದರು. ನಿರ್ಣಾಯಕರಾಗಿ ಪ್ರೋ ಸಂಗಮೇಶ ಹಾದಿಮನಿ ಪ್ರೋ ಸುನೀತಾ ಪಾಟೀಲ ರವರು ವಿದ್ಯಾರ್ಥಿಗಳ ಪರ ವಿರೋದ ವಿಚಾರಗಳನ್ನು ಆಲಿಸಿ ಪ್ರಥಮ ಸ್ಥಾನ ಕುಮಾರಿ ಸಯ್ಯದಾ ತಂಜಿಮ್‌, ದ್ವಿತಿಯ ಸ್ಥಾನ ಆಲಿಯಾ ಹಾಗೂ ಸೀಮಾ, ತೃತಿಯ ಸ್ಥಾನ ಪ್ರಜ್ವಲ ಹಾಗೂ ಮನೋಜ. ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಆಯೋಜನೆ ಮಾಡಿದ ಪ್ರೋ ಚೈತ್ರಾ ದಲಬಂಜನ ರವರು ವಿದ್ಯಾರ್ಥಿಗಳಲ್ಲಿರುವ ಸೃಜನಾತ್ಮಕ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿದರು.

ಈ ಸಂಧರ್ಭದಲ್ಲಿ ಆಡಳಿತಾಧಿಕಾರಿಗಳಾದ ಕಿಶೋರ ಮುದಗಲ್ಲ ಹಾಗೂ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ ಹಾಗೂ ಸಹ ಸಂಯೋಜಕರುಗಳಾದ ಪ್ರೋ ನಿವೇದಿತಾ ಪೋಲೀಸ ಪಾಟೀಲ, ಪ್ರೋ ಸವಿತಾ ಪೂಜಾರ, ಪಿಯುಸಿ ಸಹಸಂಯೋಜಕರಾದ ಪ್ರೋ ರಾಘವೇಂದ್ರ ನವಲಗುಂದ ಪ್ರೋ ರೇಣುಕಾ ಪಾಟೀಲ ಶ್ರೀ ಹರೀಶ ಬಾರಕೇರ, ಆಫೀಸ ಸುಪ್ರೀಡೆಂಟ ಉಮಾ ದಿನ್ನಿ, ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net