

ತಿಪಟೂರು : ಕರೊನಾದಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡ ನೋವಿನ ಮಧ್ಯೆ ಅವರ ಮರಣ ಪ್ರವಾಣ ಪತ್ರ ಪಡೆಯಲು ಹರಸಾಹಸಪಡುವಂತಾಗಿದೆ.
ಒಂದು ತಿಂಗಳ ಅವಧಿಯಲ್ಲಿ ಸಾಕಷ್ಟು ಸರ್ಕಾರಿ ನೌಕರರು ಕರೊನಾದಿಂದ ಮೃತಪಟ್ಟಿದ್ದಾರೆ. ಒಂದೆಡೆ ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡ ದುಃಖ, ಸೂತಕದ ಛಾಯೆ ಆವರಿಸಿರುವ ಮನೆಗಳಲ್ಲಿ ಮುಂದಿನ ದಾರಿ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಇದರ ನಡುವೆ ಮುಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಅಗತ್ಯವಿರುವ ಮರಣ ಪ್ರವಾಣ ಪತ್ರ ಪಡೆಯುವುದು ಕುಟುಂಬದ ಸದಸ್ಯರಿಗೆ ಸವಾಲಿನ ಕೆಲಸವಾಗಿದೆ.
ಸರ್ಕಾರ ನಿಗದಿಪಡಿಸಿರುವ ಕಾಲಮಿತಿಯಲ್ಲಿ ಮರಣ ಪ್ರವಾಣ ಪತ್ರ ಸಿಗುತ್ತಿಲ್ಲ. ಅಲ್ಲದೆ ಯಾವ ಊರಿನಲ್ಲಿ ಮೃತಪಟ್ಟಿದ್ದಾರೋ ಅಲ್ಲಿಂದಲೇ ಪ್ರವಾಣ ಪತ್ರ ಪಡೆಯುವುದು ಕಡ್ಡಾಯವಾಗಿದೆ.
ಉದಾಹರಣೆಗೆ ಯಾರಾದರೂ ತಿಪಟೂರಿನಿಂದ ಶಿವಮೊಗ್ಗ, ಬೆಂಗಳೂರು, ಮಣಿಪಾಲ. ಹಾಸನ, ತುಮಕೂರು ಸೇರಿ ವಿವಿಧೆಡೆ ಚಿಕಿತ್ಸೆಗೆ ದಾಖಲಾಗಿ ಅಲ್ಲಿ ಮೃತಪಟ್ಟರೆ ಅಲ್ಲಿದಿಂದಲೇ ಮರಣ ಪ್ರವಾಣ ಪತ್ರ ಪಡೆಯಬೇಕಿದೆ. ಈ ಕೆಲಸ ಅಂದುಕೊಂಡಷ್ಟು ಸುಲಭವಲ್ಲ. ಶಿವಮೊಗ್ಗದಲ್ಲಿ ಮೃತಪಟ್ಟವರಪ್ರವಾಣ ಪತ್ರ ಪಡೆಯಲು ಅಲ್ಲಿನ ನಗರಸಭೆಗೆ ಹೋಗಬೇಕು. ಲಾಕ್‌ಡೌನ್ ನಡುವೆ ಅನಗತ್ಯ ಓಡಾಟಕ್ಕೆ ನಿಬರ್ಂಧ, ಸಾರಿಗೆ ಸಮಸ್ಯೆ ಹೀಗೆ ಸಾಲು ಸಾಲು ನಿಯಮಾವಳಿ, ಇದೆಲ್ಲದರ ನಡುವೆ ಹೇಗೋ ಕಷ್ಟಪಟ್ಟು ಕಚೇರಿಗೆ ಹೋದರೆ ಇನ್ನೂ ಆಸ್ಪತ್ರೆಯಿಂದ ವರದಿ ಬಂದಿಲ್ಲ. ನಾಳೆ ಬನ್ನಿ ಎನ್ನುವುದು, ನೀವು ಒದಗಿಸಿರುವ ದಾಖಲೆ ಸರಿಯಿಲ್ಲ ಬೇರೆ ದಾಖಲೆ ತನ್ನಿ ಎಂದು ವಾಪಸ್ ಕಳುಹಿಸುವುದು, ಮಧ್ಯವರ್ತಿಗಳ ಮೂಲಕ ಹಣಕ್ಕೆ ಬೇಡಿಕೆ ಇಡುವುದು ನಿತ್ಯದ ಸಂಗತಿಯಾಗಿದೆ. ಸರ್ಕಾರದಿಂದ ಪ್ರವಾಣ ಪತ್ರ ಪಡೆಯಲು ಇನ್ನೆಷ್ಟು ಬಾರಿ ಕಚೇರಿಗಳಿಗೆ ಎಡತಾಕಬೇಕು
ಎಂಬ ಚಿಂತೆ ನೊಂದವರನ್ನು ಕಾಡುತ್ತಿದೆ.
ನಿಗದಿತ ಅವಧಿಯಲ್ಲಿ ದಾಖಲೆ ಒದಗಿಸದಿದ್ದರೆ ಬರುವ ಪರಿಹಾರವೂ ಕೈ ತಪ್ಪುವ ಭೀತಿ. ಸಲ್ಲದ ಆಶ್ವಾಸನೆ ಹುಸಿ ಭರವಸೆ ನೀಡುವ ಮಧ್ಯವರ್ತಿಗಳು ದಾಖಲೆ ಪತ್ರಗಳನ್ನು ಒದಗಿಸುತ್ತೇವೆ ಎಂದು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಕರೊನಾ ವಿಪತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾಧಿಕಾರಿ, ಮೃತರ ಕುಟುಂಬಸ್ಥರಿಗೆ ಅಗತ್ಯವಿರುವ ದಾಖಲೆ ಪಡೆಯುವ ವ್ಯವಸ್ಥೆ ಸರಳೀಕೃತಗೊಳಿಸಲು ಕ್ರಮಕೈಗೊಳ್ಳಬೇಕಿದೆ.
ಟಿ.ಪಿ. ಪುರುಷೋತ್ತಮ್ ತಿಪಟೂರು ನಿವಾಸಿಏನೂ ಗೊತ್ತಿಲ್ಲದವರನ್ನು ಎಲ್ಲದಕ್ಕೂ ಮೂಲ ದಾಖಲೆ ಒದಗಿಸಿ ಎನ್ನುವುದು, ಗೆಜೆಟೆಡ್ ಅಧಿಕಾರಿಗಳಿಂದ ಅಟೆಸ್ಟ್ ವಾಡಿಸಲು ಹೋದರೆ ಪರಿಚಯ ಇಲ್ಲ ಎಂದು ನಿರಾಕರಿಸಿ ನಂತರ ಹಣಕ್ಕೆ ಒತ್ತಾಯಿಸುವುದು ನಡೆಯುತ್ತಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಶೀಘ್ರ ಮರಣ ಪ್ರಮಾಣ ಪತ್ರ ಪಡೆಯಲು ವ್ಯವಸ್ಥೆ ವಾಡಬೇಕು. ಜನನ, ಮರಣದ ವರದಿ ಆಸ್ಪತ್ರೆಗಳಿಂದ ಬರುವುದು ತಡವಾದಾಗ ಪ್ರಮಾಣ ಪತ್ರ ವಿತರಿಸಲು ವಿಳಂಬವಾಗುತ್ತದೆ. ಮಾಹಿತಿ ಅಪ್‌ಲೋಡ್ ಮಾಡುವ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಬರುವ ಮುಂಚೆ ಸಾರ್ವಜನಿಕರು ಕಚೇರಿಗಳಿಗೆ ಬರುವ ಮೊದಲು ಒಮ್ಮೆ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಅರ್ಜಿ ಸ್ಥಿತಿ ಬಗ್ಗೆ ತಿಳಿದುಕೊಳ್ಳಬೇಕು. ಉಮಾಕಾಂತ್ ಆಯುಕ್ತ, ನಗರಸಭೆ, ತಿಪಟೂರು