

ಪಡುಬಿದ್ರಿ: ವಿಪರೀತ ಕುಡಿತದ ಚಟ ಹೊಂದಿದ್ದ ಇನ್ನಂಜೆ ಗ್ರಾಮದ ಗಣೇಶ(72) ಎಂಬುವರು ವಾಸವಾಗಿದ್ದ ಉಚ್ಚಿಲದ ಮನೆಯಲ್ಲಿ ಮಲಗಿದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. 5 ವರ್ಷಗಳಿಂದ ಉಚ್ಚಿಲದ ಅನ್ವರ್ ಮಹಮ್ಮದ್ ಎಂಬುವರ ಮನೆಯಲ್ಲಿ ಕೆಲಸ ಮಾಡಿಕೊಂಡಿದು, ಅಲ್ಲಿಯೇ ಕೋಣೆಯೊಂದರಲ್ಲಿ ವಾಸ ಮಾಡಿಕೊಂಡಿದ್ದವರು. ಹೃದಯಾಘಾತದಿಂದ ಅಥವಾ ಇನ್ನಾವುದೋ ಕಾರಣದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿರಬಹುದಾಗಿದೆ ಎಂದು ಪ್ರಕರಣ ದಾಖಲಿಸಿರುವ ಪಡುಬಿದ್ರಿ ಠಾಣೆ ಪೊಲೀಸರು ತಿಳಿಸಿದ್ದಾರೆ.