

ಜಮಖಂಡಿ:ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಮಾಡಿ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ದಲಿತ ಸಂರ್ಷ ಸಮಿತಿ ರಾಜ್ಯ ಸಂಚಾಲಕ ಶಾಮರಾವ ಘಾಟಗೆ ಹೇಳಿದರು.
ನಗರದ ರಮಾ ನಿವಾಸದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಲಿತರ ಮತ್ತು ದಲಿತ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ, ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯದಲ್ಲಿ ದಲಿತ ಮಹಿಳೆಯರಿಗೆ ರಣೆ ಇಲ್ಲದಂತಾಗಿದೆ. ಈ ಟನೆ ನಡೆದು ನಾಲ್ಕು ದಿನಗಳು ಕಳೆದರೂ ಇದುವರೆಗೆ ಆರೋಪಿಗಳನ್ನು ಬಂಧನ ಮಾಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.ರಾಜ್ಯದಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಸ್ವಾತಂತ್ರ ಇಲ್ಲದಂತಾಗಿದೆ. ದೇಶದ ಸಂವಿಧಾನ ಕಾಪಾಡುವ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಮೇಲೆ ನ್ಯಾಯವಾದಿ ಶೂ ಎಸೆದಿರುವುದು ನೋಡಿದರೆ ಸಂವಿಧಾನವೇ ಅಪಾಯ ಸ್ಥಿತಿಯಲ್ಲಿದೆ ಎಂದು ಸಾರ್ವಜನಿಕರಲ್ಲಿ ಕಾಡುತ್ತಿದೆ ಎಂದು ಹೇಳಿದರು.
ರಾಜ್ಯದ ಗೃಹ ಸಚಿವರು ವಿಜಯಪುರ ಜಿಲ್ಲೆಗೆ ದ ಪ್ರಾಮಾಣಿಕ ಅಧಿಕಾರಿ ನೇಮಿಸಿ ತನಿಖೆ ಮಾಡಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕು. ಬಾಲಕಿಯ ಕುಟುಂಬಕ್ಕೆ 25 ಲ ರೂ. ಪರಿಹಾರ ನೀಡಬೇಕು, 4 ಎಕರೆ ಜಮೀನು ನೀಡಬೇಕು, ಸರ್ಕಾರಿ ನೌಕರಿ ನೀಡಬೇಕು ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಇಂತಹ ಟನೆಗಳು ಮರುಕಳಿಸದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಹರಿಜನ, ಪರಶುರಾಮ ಮಾಂಗ, ಮುಕೇಶ ಅರಳಿಕಟ್ಟಿ, ನದೀಂ ಗೋಠೆ, ನಾಗೇಶ ಹೆಗಡೆ ಇತರರು ಇದ್ದರು.
ಜಮಖಂಡಿ ನಗರದ ರಮಾ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ರಾಜ್ಯ ಸಂಚಾಲಕ ಶಾಮರಾವ ಘಾಟಗೆ ಮಾತನಾಡಿದರು. ಲಕ್ಷ$್ಮಣ ಹರಿಜನ, ಪರಶುರಾಮ ಮಾಂಗ, ಮುಕೇಶ ಅರಳಿಕಟ್ಟಿ, ನದೀಂ ಗೋಠೆ, ನಾಗೇಶ ಹೆಗಡೆ ಇದ್ದಾರೆ.