ಡ್ಯಾಂನಲ್ಲಿ ಮುಳುಗಿ ಯುವಕ ಸಾವು

Death Indicative image
Published on

ಬೆಳ್ತಂಗಡಿ: ಕುಕ್ಕೇಡಿ ಗ್ರಾಮದ ಉಮಿಲಾಯಿ ಡ್ಯಾಂ ಕೆಳಗಡೆ ಇರುವ ಗುಂಡಿಯಲ್ಲಿ ಸೋಮವಾರ ಯುವಕ ಮುಳುಗಿ ಮೃತಪಟ್ಟಿದ್ದಾನೆ. ಮಾಲಾಡಿ ಗ್ರಾಮದ ಪುರಿಯ ನಿವಾಸಿ ದಿ.ಕುಂಞ ಮತ್ತು ದಿ.ಗುಲಾಬಿ ದಂಪತಿ ಪುತ್ರ ರವೀಂದ್ರ(20) ಮೃತಪಟ್ಟವರು.

ರವೀಂದ್ರ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಇದ್ದವರು ಬಟ್ಟೆ, ಕೋಲುಗಳನ್ನು ಹಾಕಿ ರಕ್ಷಣೆಗೆ ಮುಂದಾದರೂ ನೀರಿನ ಆಳಕ್ಕೆ ಮುಳುಗಿದ್ದರಿಂದ ಸಾವನ್ನಪ್ಪಿದ್ದಾನೆ.

ಅನಾಥೆಯಾದ ಸಹೋದರಿ: ತಂದೆ ಹಲವಾರು ವರ್ಷಗಳ ಹಿಂದೆ ತೀರಿಕೊಂಡರೆ ತಾಯಿ ನಾಲ್ಕು ತಿಂಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಈತ ಸಹೋದರಿ ಜತೆ ಮಾವನ ಮನೆಯಲ್ಲಿದ್ದರು. ಈತ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಸಹೋದರಿ ಬೀಜದ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಈಗ ಸಹೋದರನನ್ನು ಕಳೆದುಕೊಂಡು ಅನಾಥೆಯಾಗಿದ್ದಾಳೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net