

ಉಡುಪಿ: ಕಾರ್ಕಳದ ಬೈಲೂರಿನ ರಂಗನಪಲ್ಕೆಯಲ್ಲಿರುವ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಸಾವನಪ್ಪಿದ್ದು, ಅವರ ಮೃತದೇಹವನ್ನು ಉಡುಪಿಯ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇಡಲಾಗಿದೆ.
ಉಡುಪಿ ಕುರ್ಕಾಲು ನಿವಾಸಿ ಗಿರಿಜಾ ಶೇರಿಗಾರ್ತಿ (62) 2 ತಿಂಗಳಿಂದ ಆಶ್ರಮದಲ್ಲಿ ಆಶ್ರಯ ಪಡೆದಿದ್ದು, ಜುಲೈ 21ರಂದು ಮೃತಪಟ್ಟಿದ್ದಾರೆ. ಉತ್ತರಪ್ರದೇಶದ ನಿವಾಸಿ ಕನ್ಹಯ್ಯಲಾಲ್ (65), 1 ವರ್ಷದಿಂದ ಆಶ್ರಮದಲ್ಲಿದ್ದು, 26ರಂದು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬದವರು ಇದ್ದಲ್ಲಿ ಕೂಡಲೇ ಹೊಸಬೆಳಕು ಆಶ್ರಮ (ಮೊ.ಸಂ. 6364777100) ಸಂಪರ್ಕಿಸುವಂತೆ ಆಶ್ರಮದ ಮುಖ್ಯಸ್ಥೆ ತನುಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.