

ನೆಲಮಂಗಲ: ರಾ.ಹೆದ್ದಾರಿ 48ರ ಕುಣಿಗಲ್ ವೃತ್ತದಲ್ಲಿ ಲಾರಿ ಡಿಕ್ಕಿಯಾಗಿ ದ್ವಿಚಕ್ರವಾಹನದಲ್ಲಿದ್ದ ಇಬ್ಬರು ಡಾನ್ಸರ್ಗಳು ಮೃತಪಟ್ಟಿದ್ದಾರೆ. ಬೆಂಗಳೂರಿನ ಶ್ರೀರಾಮಪುರದ ಪ್ರಜ್ವಲ್(22), ಕುರುಬರಹಳ್ಳಿ ನಿವಾಸಿ ಸಹನಾ (21) ಮೃತರು. ಭಾನುವಾರ ಪ್ರಜ್ವಲ್, ಸಹನಾ ಸೇರಿ 10 ಮಂದಿ ಕುಣಿಗಲ್ನ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ಇವೆಂಟ್ಗೆ ತೆರಳಿದ್ದರು.
ಕಾರ್ಯಕ್ರಮ ಮುಗಿಸಿಕೊಂಡು ತಡರಾತ್ರಿ ದ್ವಿಚಕ್ರವಾಹನದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ರಾ.ಹೆದ್ದಾರಿಯ ಕುಣಿಗಲ್ ವೃತ್ತದ ಬಳಿ ಬೆಂಗಳೂರಿನ ಕಡೆಯಿಂದ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಚಲಾಯಿಸುತ್ತಿದ್ದ ಇಬ್ಬರೂ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಲಾರಿ ಸೇರಿ ಚಾಲಕನನ್ನು ವಶಪಡಿಸಿಕೊಂಡು ಮೃತ ದೇಹಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು. ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬಸ್ಥರ ಆಕ್ರಂದನ: ಪ್ರಜ್ವಲ್ ಹಾಗೂ ಸಹನಾ ಇಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ವಿಷಯ ತಿಳಿಯುತ್ತಿದಂತೆ ನಗರದ ಸಾರ್ವಜನಿಕ ಆಸ್ಪತ್ರೆ ಶವಗಾರ ಬಳಿ ಆಗಮಿಸಿದ್ದ ಇಬ್ಬರ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಲವು ಶೋನಲ್ಲಿ ಭಾಗಿ : ಮೃತರಿಬ್ಬರೂ ಸ್ನೇಹಿತರಾಗಿದ್ದು, ಉತ್ತಮ ಡಾನ್ಸರ್ಸ್ಗಳಾಗಿದ್ದರು. ಸಿನಿಮಾ, ರಿಯಾಲಿಟಿ ಶೋ, ರಾಜಕೀಯ ವೇದಿಕೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದರು. ಜತೆಗೆ ವಿವಿಧ ಶಾಲೆಯ ಸಾಂಸತಿಕ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಿದ್ದರು. ಅಲ್ಲದೆ ಡಾನ್ಸಿಂಗ್ ೇತ್ರದಲ್ಲಿ ಉತ್ತಮ ಹೆಸರು ಮಾಡುವ ಕನಸು ಕಟ್ಟಿಕೊಂಡಿದ್ದರೆಂದು ಕುಟುಂಬಸ್ಥರು ತಿಳಿಸಿದರು.