ಗೋಮಾಳದಲ್ಲಿದ್ದ ಹತ್ತಾರು ಮರಗಳ ಮಾರಣಹೋಮ

FotoJet
Published on

ದಾಬಸ್‌ಪೇಟೆ: ನೆಲಮಂಗಲ ತಾಲೂಕು ಸೋಂಪುರ ಹೋಬಳಿ ಕಲ್ಲುನಾಯಕನಹಳ್ಳಿಯ ಗೋಮಾಳದಲ್ಲಿದ್ದ ಹತ್ತಾರು ಮರಗಳ ಮಾರಣಹೋಮ ಮಾಡಲಾಗಿದೆ.

9 ಹೊಂಗೆ ಮರ, 15 ನೀಲಗಿರಿ ಮರ, 1 ನೇರಳೆಮರ, 1 ಬೇವಿನ ಮರ ಹಾಗೂ 10 ಕಾಡುಮರಗಳನ್ನು ಕಡಿದು ನೆಲೆಕ್ಕುರುಳಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳನ್ನು ಮಾಹಿತಿ ಕೇಳಿದರೆ ಅದು ನಮಗೆ ಸಂಬಂಧಿಸಿದ್ದಲ್ಲ, ಕಂದಾಯ ಇಲಾಖೆಯವರನ್ನು ಕೇಳಿ ಅನ್ನುತ್ತಾರೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಳಲು ಸಂಪರ್ಕಿಸಿದರೆ ತಹಸೀಲ್ದಾರ್ ಕರೆ ಸ್ವೀಕರಿಸಿರುವುದಿಲ್ಲ.

ಮರಗಳನ್ನು ಕಡಿದ ಕಟುಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸಂಬಂಧಿಸಿದ ಇಲಾಖೆ ಮುಂದಾಗಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಶ್ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net