ರೂಪಾ ನಿಧನ

Death of Rupa
Published on

ಮಡಿಕೇರಿ:

ವಿಕಾಸ್ ಜನ ಸೇವಾ ಟ್ರಸ್ಟ್‌ನ ಸಂಸ್ಥಾಪಕ ರಮೇಶ್ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಸಾವನ್ನಪ್ಪಿದ ಬೆನ್ನಲ್ಲೇ ಪತ್ನಿ ರೂಪಾ ಕೂಡ ಚಿಕಿತ್ಸೆ ಫಲಿಸದೆ ಸೋಮವಾರ ನಡುರಾತ್ರಿ ಮೈಸೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಾಲ್ಕು ದಿನಗಳ ಕಾಲ ಚಿಂತಾಜನಕ ಸ್ಥಿತಿಯಲ್ಲಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸಿದ ರೂಪಾ ಕೂಡ ಪತಿಯ ದಾರಿ ಹಿಡಿದಿದ್ದಾರೆ. ಪತಿ ರಮೇಶ ಭಾನುವಾರ ಮೃತಪಟ್ಟಿದ್ದರು. ಈ ಮೂಲಕ ಹಲವಾರು ಜೀವಗಳಿಗೆ ಆಶ್ರಯ ನೀಡಿದ್ದ ರಮೇಶ್ ಮತ್ತು ರೂಪಾ ದಂಪತಿ ದುರಂತ ಸಾವು ಕಂಡಂತಾಗಿದೆ. ಜನ ಸೇವಾ ಟ್ರಸ್ಟ್‌ನಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರ ಜತೆಗೆ ಈ ದಂಪತಿಯ ಮಕ್ಕಳು ಕೂಡ ಈಗ ಅನಾಥರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net