ಎಂಬಿಬಿಎಸ್ ವಿದ್ಯಾರ್ಥಿನಿಯರ ಸಾವು

Published on

ಗೋಕರ್ಣ: ಇಲ್ಲಿನ ಜಟಾಯುತೀರ್ಥ ಬಳಿ ಟ್ರಾಕಿಂಗ್ ನಡೆಸುತ್ತಿದ್ದ ಇಬ್ಬರು ಯುವತಿಯರು ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಮೃತರನ್ನು ತಮಿಳುನಾಡಿನ ಕಿನ್ನಿಮೋಳಿ ಮತ್ತು ಇಂದುಜಾ ಎಂದು ಗುರುತಿಸಲಾಗಿದೆ. ಇವರು ತ್ರಿಚಿಯಲ್ಲಿನ ಎಸ್.ಆರ್. ಕಾಲೇಜ್ನಲ್ಲಿ ಎಂಬಿಬಿಎಸ್ ಕೊನೆ ವರ್ಷದ ವಿದ್ಯಾರ್ಥಿಗಳು.

23 ಭಾವಿ ವೈದ್ಯರು ಇಲ್ಲಿಗೆ ಟ್ರಾಕಿಂಗ್‌ಗೆ ಬಂದಿದ್ದರು. ಜಟಾಯು ತೀರ್ಥದ ಬಂಡೆ ಮೇಲೆ ಕುಳಿತು ಐವರು ಫೋಟೋ ಶೂಟ್ ಮಾಡುತ್ತಿದ್ದಾಗ ಸಮುದ್ರದ ಭಾರಿ ಅಲೆ ಬಡಿದು ಯುವತಿಯರು ನೀರು ಪಾಲಾದರು. ಹತ್ತಿರದ ಕುಡ್ಲೆ ತೀರದಲ್ಲಿ ಟೂರಿಸ್ಟ್ ಬೋಟ್ ನಿರ್ವಹಿಸುವ ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ತಕ್ಷಣ ಜೆಟ್ ಸ್ಕೀ ಮೂಲಕ ಇಬ್ಬರು ಯುವತಿಯರನ್ನು ಮತ್ತು ಇವರ ರಕ್ಷಣೆಗೆ ನೀರಿಗೆ ಹಾರಿದ್ದ ಯುವಕನನ್ನು ನೀರಿನಿಂದ ಮೇಲೆತ್ತಿದರು. ಆದರೆ, ಯುವತಿಯರು ಆಗಲೇ ಸಾವನ್ನಪ್ಪಿದ್ದರು. ಯುವಕ ಪ್ರಾಣಪಾ ದಿಂದ ಪಾರಾಗಿದ್ದು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net