ಹಸಿವು ತಾಳದೇ ದಾಳಿಂಬೆ ಗಿಡದ ಚಿಗುರನ್ನೇ ತಿಂದು ನೂರಾರು ಕುರಿಗಳ ಸಾವು!ಕುರಿಗಾಹಿಗಳ ಆಕ್ರಂದನ

Pomogranate
Published on

ವಿಜಯನಗರ: ನಿರಂತರ ಮಳೆಯಿಂದಾಗಿ ತಿನ್ನಲೂ ಏನೂ ಸಿಗದ ಕಾರಣ ಕುರಿಗಳು ದಾಳಿಂಬೆ ಗಿಡದ ಚಿಗುರನ್ನೇ ತಿಂದ ಪರಿಣಾಮ ನೂರಾರು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ನೂರಾರು ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಅಸ್ವಸ್ಥಗೊಂಡಿರುವ 30 ಕುರಿಗಳಿಗೆ ಪಶು ವೈದ್ಯರಿಂದ ಸ್ಥಳದಲ್ಲೇ ಚಿಕತ್ಸೆ ನೀಡಲಾಗುತ್ತಿದೆ.

ಬನ್ನಿಕಲ್ಲು ಗ್ರಾಮದ ಕರಿಬಸಪ್ಪ, ಟಿ. ಕೊಟ್ರೇಶ್, ಸಿ. ವೀರೇಶ, ಮಂಜುನಾಥ ಕರಿಬಸವ ಸಜ್ಜಿ ಎಂಬುವವರಿಗೆ ಸೇರಿದ ಕುರಿಗಳಾಗಿದ್ದು, ಕುರಿಗಳ ದಿಢೀರ್​ ಸಾವಿನಿಂದ ಕಂಗೆಟ್ಟಿದ್ದಾರೆ. ಒಮ್ಮೆಲೇ ನೂರಾರು ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಕಣ್ಣೀರಿಡುತ್ತಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಮತ್ತು ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ಕುರಿಗಳು ಹೆಚ್ಚು ದಾಳಿಂಬೆ ಗಿಡದ ಚಿಗುರು ತಿಂದು, ಫುಡ್​ ಪಾಯ್ಸನ್​ನಿಂದ ಸಾವನ್ನಪ್ಪಿವೆ ಎಂದು ವೈದ್ಯರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net