

ನಂಜನಗೂಡು: ನಂಜನಗೂಡು-ಚಾಮರಾಜನಗರ ಮುಖ್ಯರಸ್ತೆ ಗೋಳೂರು ಗ್ರಾಮದ ಸಮೀಪ ಅಪರಿಚಿತ ವ್ಯಕ್ತಿ ಶನಿವಾರ ಅಪಘಾತದಿಂದ ಮೃತಪಟ್ಟಿದ್ದಾರೆ. 55 ರಿಂದ 60 ವರ್ಷದ ಅಪರಿಚಿತ 5.8 ಎತ್ತರ, ಬೊಕ್ಕಲುತಲೆ, ಕಪ್ಪು ಬಣ್ಣದ ಶರ್ಟ್, ಕಪ್ಪು ಬಣ್ಣದ ಜರ್ಕಿನ್ ಧರಿಸಿದ್ದು, ವಾರಸುದಾರರು ಇದ್ದಲ್ಲಿ ನಂಜನಗೂಡು ಸಂಚಾರ ಠಾಣೆಯ ಮೊ: 9480805055 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.