ಮೀನು ಹಿಡಿಯುವುದಕ್ಕೆ ಹಾಕಿದ್ದ ಬಲೆಗೆ ಬಿದ್ದ ಮೊಸಳೆ ಸಾವು

mosale
Published on

ಬಾಗಲಕೋಟೆ: ಮೀನುಗಾರರು ಮೀನು ಹಿಡಿಯುವುದಕ್ಕೆಂದು ಹಾಕಿದ್ದ ಬಲೆಗೆ ಮೊಸಳೆ ಸಿಕ್ಕಿ ಬಿದ್ದು ಸತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮಗತಿಯಲ್ಲಿ ನಡೆದಿದೆ.

ಕಮಗತಿಯ ಪಟ್ಟಣದಲ್ಲಿರುವ ಕೆರೆಯಲ್ಲಿ ಮೀನು ಹಿಡಿಯುವ ಸಲುವಾಗಿ ಮೀನುಗಾರರು ಬಲೆ ಹಾಕಿ ಹೋಗಿದ್ದರು. ಬೆಳಗ್ಗೆ ಬಂದು ನೋಡಿದಾಗ ಬಲೆಯಲ್ಲಿ ಮೊಸಳೆ ಸಿಕ್ಕಿಕೊಂಡು ಸತ್ತಿರುವುದು ಕಂಡುಬಂದಿದೆ. ಮೃತ ಮೊಸಳೆಯು ಕೆರೆಯಲ್ಲಿ ತೇಲಾಡುತ್ತಿತ್ತು.

ಘಟನೆ ನಡೆದ ಸ್ಥಳಕ್ಕೆ ಹುನಗುಂದ ತಾಲೂಕಿನ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net