ಟರ್ಪೆಂಟ್ ಆಯಿಲ್ ಕುಡಿದು ಮಗು ಸಾವು

death news
Published on

ನೆಲಮಂಗಲ: ಟರ್ಪೆಂಟ್ ಆಯಿಲ್ ಕುಡಿದು ಮಗು ಮೃತಪಟ್ಟಿರುವುದು ನಗರಸಭೆ ವ್ಯಾಪ್ತಿಯ ಉತ್ತಾಸಿಪಾಳ್ಯದಲ್ಲಿ ನಡೆದಿದೆ.
ಜಮೀರ್‌ಪಾಷಾ ಎಂಬುವವರ ಪುತ್ರಿ ಅಂಜು ಫಾತೀಮಾ (2) ಮೃತ ದುರ್ದೈವಿ. ಮೂಲತಃ ಮಾಗಡಿ ತಾಲೂಕಿನವರಾದ ಪಾಷಾ ಆರೇಳು ವರ್ಷದಿಂದ ಉತ್ತಾಸಿಪಾಳ್ಯದಲ್ಲಿ ವಾಸವಾಗಿದ್ದರು. ಕುರಿ, ಮೇಕೆ ವ್ಯಾಪಾರ ಮಾಡುತ್ತಿದ್ದ ಇವರು ಮೇ 20ರಂದು ಕುರಿಗೆ ಬಣ್ಣ ಬಳಿಯಬೇಕಾಗಿದ್ದರಿಂದ ಟರ್ಪೆಂಟ್ ಆಯಿಲ್ ತಂದಿದ್ದರು. ಅದೇ ದಿನ ಸಂಜೆ ಮಗು ನೀರು ಕುಡಿಯುವ ಧಾವಂತದಲ್ಲಿ ಬಾಟಲಿಯಲ್ಲಿದ್ದ ಟರ್ಪೆಂಟ್ ಆಯಿಲ್ ಕುಡಿದಿದೆ.
ಸ್ಥಳೀಯರ ಸಹಾಯದಿಂದ ತಕ್ಷಣ ಸುಭಾಷ್ ನಗರ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net