ಭಗಿನಿ ಮಾರಿಯಂಜ್ ಬಿ. ಎಸ್. ನಿಧನ

mng-15nov-maariyanch
Published on




ಮಂಗಳೂರು : ಬೆಥನಿ ಕನ್ಯಾ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ಭಗಿನ ಮಾರಿಯಂಜ್ (77)ಅವರು ಅನಾರೋಗ್ಯದಿಂದ ನ.14ರಂದು ನಿಧನರಾದರು.ಬಾಲ್ಯದಲ್ಲಿಯೇ ಧಾರ್ಮಿಕ ವಿಚಾರಗಳ ಬಗ್ಗೆ ಆಸಕ್ತಿಯನ್ನು ಹೊಂದಿದ್ದ ಅವರು 1963 ರಲ್ಲಿ ಮಂಗಳೂರಿನ ಬೆಂದೂರಿನಲ್ಲಿರುವ ಬೆಥನಿ ಕನ್ಯಾಮಠಕ್ಕೆ ಸೇರಿದರು. ಬೆಥನಿಯ ಅನೇಕ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ ಹಾಗೂ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಬೆಂದೂರಿನ ಬೆಥನಿ ಮಾತೃ ಸಂಸ್ಥೆಯ ಸಚೇತನ (ಬೆಥನಿ ಗ್ರಾಮೀಣ ಕೇಂದ್ರ ) ಇಲ್ಲಿ ಸೇವೆ ಸಲ್ಲಿಸಿದರು.ಕೊಂಕಣಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪರಿಣತಿ ಹೊಂದಿದ್ದ ಅವರು ಹಲವಾರು ಪುಸ್ತಕಗಳನ್ನು ಮತ್ತು ಲೇಖನಗಳನ್ನು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net