ಯಕ್ಷಗಾನ ಕಲಾವಿದ ಮಣ್ಣಿಗೆ ತಿಮ್ಮಣ್ಣಯಾಜಿ ನಿಧನ

death
Published on

ಕುಂದಾಪುರ: ಯಕ್ಷಗಾನದ ಶಕಪುರುಷ ಕೆರೆಮನೆ ಶಿವರಾಮ ಹೆಗಡೆ ಜತೆ ಪಾತ್ರ ಮಾಡುತ್ತಿದ್ದ, ಹಿರಿಯ ಯಕ್ಷಗಾನ ಕಲಾವಿದ ತಿಮ್ಮಣ್ಣ ಯಾಜಿ ಮಣ್ಣಿಗೆ (94) ಮಿದುಳು ಆಘಾತದಿಂದ ಮಂಗಳವಾರ ಸಾಯಂಕಾಲ ನಿಧನರಾದರು.

ಕೆರೆಮನೆಯ ಮೂರು ತಲೆಮಾರಿನ ಕಲಾವಿದರ ಜತೆ ಅಭಿನಯಿಸಿದ ಅವರು ಕೆರೆಮನೆ ಮೇಳದಿಂದ ಕಲಾಸೇವೆ ಆರಂಭಿಸಿ, ಅಲ್ಲಿಂದಲೇ ನಿವೃತ್ತಿ ಪಡೆದಿದ್ದರು. ಶಿವರಾಮ ಹೆಗಡೆ ಜರಾಸಂಧ ಅವರ ಭೀಮನ ಜೋಡಿ ಪ್ರಸಿದ್ಧವಾಗಿತ್ತು.

ಭೀಮ, ಧರ್ಮರಾಯ, ಕಿರಾತ ಮೊದಲಾದ ಪಾತ್ರಗಳು ಪ್ರಸಿದ್ಧವಾಗಿದ್ದವು. ಸೋಮವಾರ ಅವರ ಮೊಮ್ಮಗನ ಹುಟ್ಟು ಹಬ್ಬದ ಅಂಗವಾಗಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದು, ಅದನ್ನು ವೀಕ್ಷಿಸಿದ್ದರು. ಆ ಬಳಿಕ ರಾತ್ರಿ ಆರೋಗ್ಯ ಕೆಟ್ಟಿದೆ. ಅವರು ಇಳಿವಯಸ್ಸಿನಲ್ಲಿ ದೇವಾಲಯವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡಿದ್ದರು.

ಮೂವರು ಪುತ್ರರು ಹಾಗೂಪುತ್ರಿಯರನ್ನು ಅಗಲಿದ್ದಾರೆ. ಕೆರೆಮನೆ ಶಿವಾನಂದ ಹೆಗಡೆ, ಬಳ್ಕೂರ ಕೃಷ್ಣಯಾಜಿ, ಸಪ್ತಕದ ಜಿ.ಎಸ್ ಹೆಗಡೆ ತಿಮ್ಮಣ್ಣಯಾಜಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net