ವಿದ್ಯುತ್ ಆಘಾತ, ಬಾಲಕ ಸಾವು

Dead Body
Published on

ಕುಂದಾಪುರ: ತಲ್ಲೂರು ಉಪ್ಪಿನಕುದ್ರು ಎಂಬಲ್ಲಿ ಶನಿವಾರ ರಾತ್ರಿ ದೇವಸ್ಥಾನದ ಕಂಪೌಂಡ್ ಗೋಡೆಗೆ ಅಳವಡಿಸಿದ್ದ ವಿದ್ಯುದ್ದೀಪದ ತಂತಿ ತಗುಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಉಪ್ಪಿನಕುದ್ರು ಗಂಗಾಧರ ಆಚಾರ್ ಎಂಬುವರ ಪುತ್ರ ಧನುಷ್(16) ಮೃತ ಬಾಲಕ. 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಧನುಷ್, ಮನೆ ಸಮೀಪದ ಶ್ರೀಲಲಿತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆಂದು ರಾತ್ರಿ ಮನೆಯಿಂದ ಹೋಗಿದ್ದ.

ದೇವಸ್ಥಾನದಲ್ಲಿ ನವರಾತ್ರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆವರಣ ಗೋಡೆಗೆ ಅಳವಡಿಸಿದ ಅಲಂಕಾರಿಕಾ ವಿದ್ಯುದ್ದೀಪಗಳ ಕೇಬಲ್ ಆಕಸ್ಮಿಕವಾಗಿ ತಾಗಿ ಧನುಷ್ ತೀವ್ರ ಅಸ್ವಸ್ಥಗೊಂಡರೆನ್ನಲಾಗಿದೆ.

ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಧನುಷ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net