ಬೆಂಗಳೂರಿನ ಯುವಕರಿಬ್ಬರು ನೀರುಪಾಲು

Dead body 1 JUNE 20
Published on

ಪಡುಬಿದ್ರಿ: ಉಡುಪಿ ಜಿಲ್ಲೆಯ ಕಾಪು ಬೀಚ್‌ನಲ್ಲಿ ಭಾನುವಾರ ಸಾಯಂಕಾಲ ಸಮುದ್ರಕ್ಕೆ ಇಳಿದಿದ್ದ ಬೆಂಗಳೂರಿನ ಹೆಸರಘಟ್ಟದ ಕಾರ್ತಿಕ್(23) ಮತ್ತು ರೂಪೇಶ್(21) ಎಂಬುವರು ಮುಳುಗಿ ಮೃತಪಟ್ಟಿದ್ದಾರೆ.

ದಿಲೀಪ್, ಲಿಖಿತ್ ಹಾಗೂ ಜಯಂತ್ ಸೇರಿ ಐವರು ಬೆಂಗಳೂರಿನಿಂದ ಶನಿವಾರ ಧರ್ಮಸ್ಥಳ ಮತ್ತಿತರೆಡೆ ಸುತ್ತಾಡಿ ಭಾನುವಾರ ಕಾಪುವಿಗೆ ಆಗಮಿಸಿದ್ದರು.

ಬೀಚ್ ಸೌಂದರ್ಯ ಆಸ್ವಾದಿಸುತ್ತಿದ್ದ ಅವರು ಕಾವಲು ಸಿಬ್ಬಂದಿಯ ಮಾತನ್ನು ಲೆಕ್ಕಿಸದೆ ಸಮುದ್ರ ಸ್ನಾನಕ್ಕೆ ಇಳಿದಿದ್ದರು.

ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ಉಳಿದ ಮೂವರನ್ನು ಬೀಚ್ ನಿರ್ವಾಹಕರು ರಕ್ಷಿಸಿದ್ದರು. ದೂರ ತೆರಳಿದ್ದ ಕಾರ್ತಿಕ್ ಮತ್ತು ರೂಪೇಶ್ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net