Death News : ಖ್ಯಾತ ಸಂಸ್ಕೃತ ವಿದ್ವಾಂಸ ವಿ. ಕೆ. ಹಂಪಿಹೊಳಿ ನಿಧನ

Death News
Published on

ಕುಮಟಾ Death News : ಖ್ಯಾತ ಸಂಸ್ಕೃತ ವಿದ್ವಾಂಸ, ಪಟ್ಟಣದ ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ಡಾ. ವಿ. ಕೆ. ಹಂಪಿಹೊಳಿ(71) ಗುರುವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ, ಪುತ್ರ ಅಪಾರ ಬಂಧುಗಳಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗದ ತಾಲೂಕಿನ ಹಂಪಿಹೊಳಿಯವರಾದ ಅವರು, ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜ್ ಹಾಗೂ ವಾಣಿಜ್ಯ ಕಾಲೇಜ್‌ಗಳಲ್ಲಿ 34 ವರ್ಷ ಉಪನ್ಯಾಸಕರಾಗಿ ನಂತರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ವಿಶ್ವವಿದ್ಯಾಲಯ ನೀಡುವ ವಿಶೇಷ ಗೌರವ `ಪ್ರೊ. ಎಮಿರೇಟ್ಸ್ ಪ್ರಶಸ್ತಿಗೆ  ಭಾಜನರಾಗಿದ್ದರು. ವಾತ್ಸಾಯನ ಕಾಮಸೂತ್ರದ ಮೇಲೆ ವಿಶೇಷ ಸಂಶೋಧನೆ ನಡೆಸಿ, ಪಿಎಚ್‌ಡಿ ಗ್ರಂಥ ಬರೆದಿದ್ದರು. ಕುಮಟಾದ ಗಂಧರ್ವ ಸಂಗೀತ ಕಲಾ ಕೇಂದ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

Death News

ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನೂರಕ್ಕೂ ಹೆಚ್ಚು ಸೆಮಿನಾರ್‌ಗಳಲ್ಲಿ ಪ್ರಬಂಧ ಹಾಗೂ ವಿಷಯ ಮಂಡಿಸಿದ್ದರು. ವೇದದ ಮೇಲೆ ಅಗಾಧ ಪಾಂಡಿತ್ಯ ಹೊಂದಿದ್ದು ಯಜುರ್ವೇದದ ಮೇಲೆ ರಾಜ್ಯದಲ್ಲೇ ವಿಶೇಷ ಜ್ಞಾನ ಹೊಂದಿದ ಕೆಲವೇ ಪಂಡಿತರಲ್ಲಿ ಒಬ್ಬರಾಗಿದ್ದರು. ಶ್ರೀಮದ್ ಭಾಗವತ ಸಪ್ತಾಹದಲ್ಲಿ ನೂರಾರು ಉಪನ್ಯಾಸ ನೀಡಿದ್ದರು. ವೇದ, ಸಂಸ್ಕೃತಿ, ಹಿಂದು ಸಂಪ್ರದಾಯ ಇತ್ಯಾದಿ ವಿಷಯಗಳ ಬಗ್ಗೆ 500ಕ್ಕೂ ಹೆಚ್ಚು ಲೇಖನ ಬರೆದಿದ್ದರು. ಗಣೇಶ ಹಬ್ಬ, ದಸರಾ, ದೀಪಾವಳಿ, ಯುಗಾದಿ ಇತ್ಯಾದಿ ಹಬ್ಬಗಳು ಹಾಗೂ ಆಚರಣೆಗಳು ಕುರಿತಾಗಿ ಟಿವಿಗಳಲ್ಲಿ ಇವರ ಸಂದರ್ಶನಗಳು ಹಾಗೂ ಇವರ ಪ್ರಸ್ತುತಿಗಳು ಪ್ರಸಾರವಾಗಿವೆ. ಸಂಸ್ಕೃತ ಭಾಷೆ, ಸಾಹಿತ್ಯ, ಛಂದಸ್ಸು, ವ್ಯಾಕರಣ, ವಾಂಙಯ ಇತ್ಯಾದಿಗಳ ಬಗೆಗಿನ ಸಂಶಯಗಳನ್ನು ನಿವಾರಿಸಿಕೊಳ್ಳಲು ಜಿಲ್ಲೆಯ ವಿದ್ವಾಂಸರು ಹಾಗೂ ಉಪನ್ಯಾಸಕರು ಅವರನ್ನು ಸಂಪರ್ಕಿಸುತ್ತಿದ್ದರು.

Death News

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net