ಸಾವಿನಲ್ಲೂ ಸಾರ್ಥಕ ಮೆರೆದ ರೈತ, ಬಳ್ಳಾರಿಗೆ ವಿಮ್ಸ್‌ಗೆ ದೇಹದಾನ

R Somashekhar Gouda No10 Muddapura Farmer Death
Published on

ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ರೈತ ಆರ್.ಸೋಮಶೇಖರ ಗೌಡ (60) ಭಾನುವಾರ ಸಂಜೆ ನಿಧನರಾಗಿದ್ದು, ವಿಮ್ಸ್ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವಿದೆ. 2016ರ ಅಕ್ಟೋಬರ್‌ನಲ್ಲಿ ಸ್ವಪ್ರೇರಣೆಯಿಂದ ವಿಮ್ಸ್‌ಗೆ ದೇಹದಾನ ಮಾಡುವುದಾಗಿ ನೋಂದಣಿ ಮಾಡಿಸಿದ್ದರು. ವೀರಶೈವ ಪದ್ಧತಿಯಂತೆ ಪಾರ್ಥೀವ ಶರೀರಕ್ಕೆ ಪೂಜಾ ವಿಧಿವಿಧಾನ ಪೂರೈಸಿದ ಬಳಿಕ ಗ್ರಾಮಕ್ಕೆ ಆಗಮಿಸಿದ್ದ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿಗೆ ಒಪ್ಪಿಸಲಾಯಿತು. ಶಾಸಕ ಜೆ.ಎನ್.ಗಣೇಶ್ ಇತರರು ಅಂತಿಮ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net