ತಾಂತ್ರಿಕ ಶಿಲ್ಪಿ ಕೋಟ ರಾಮಚಂದ್ರ ಆಚಾರ್ಯ ನಿಧನ

achayra new
Published on

ಕೋಟ: ತಾಂತ್ರಿಕ ಶಿಲ್ಪಿ ಕೋಟ ರಾಮಚಂದ್ರ ಆಚಾರ್ಯ(59)ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಕೋಟ ಪರಿಸರದಲ್ಲಿ ಚಾಣಾಕ್ಷತನದ ಕೆಲಸದಿಂದ ತಾಂತ್ರಿಕ ಶಿಲ್ಪಿ ಎಂದೇ ಪ್ರಸಿದ್ಧಿ ಪಡೆದಿದ್ದರು. ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಕಾಸರಗೋಡು ಸೇರಿದಂತೆ ರಾಜ್ಯಾದ್ಯಂತ ದೇವಳ ಧ್ವಜಮರ ನಿಲ್ಲಿಸುವ ಹಾಗೂ ವಾಹನಗಳು ಅಪಘಾತಕ್ಕೀಡಾದಾಗ ಅವುಗಳನ್ನು ಮೇಲೆತ್ತುವುದು. ಅನಾರೋಗ್ಯಕ್ಕೀಡಾಗಿ ಕೈಕಾಲು ಬಿದ್ದ ನೂರಾರು ಜಾನುವಾರುಗಳನ್ನು ಮೇಲಕ್ಕೆತ್ತಿ ಅವುಗಳ ಜೀವ ಉಳಿಸುವಲ್ಲಿಯೂ ಅವರು ಎತ್ತಿದ ಕೈ ಆಗಿದ್ದರು. 2010ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net